ಮೈಸೂರು :ದಸರಾ ಸಮೀಪಿಸುತ್ತಿದ್ದಂತೆ ಆನೆಗಳ ತಯಾರಿ ಮತ್ತು ಅಂಬಾರಿ ಹೊರುವ ಆನೆಗಳ ಪಳಗಿಸುವ ಕಾರ್ಯ ಜೋರಾಗಿದೆ. ಇನ್ನು ಕೇವಲ ಒಂದು ವಾರದೊಳಗೆ ದಸರಾದಲ್ಲಿ ಭಾಗಿಯಾಗುವ ಆನೆಗಳ ಪಟ್ಟಿ ಸಿದ್ದವಾಗುತ್ತದೆ ಎಂದು ಡಿಸಿಎಫ್ (ಅರಣ್ಯ ಉಪಸಂರಕ್ಷಣಾಧಿಕಾರಿ) ಅಲೆಗ್ಸಾಂಡರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿರುವ ಆನೆ ಶಿಬಿರಗಳಲ್ಲಿ ದಸರಾ ಗಜಪಡೆ, ಆನೆಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಆನೆಗಳ ಹಾವಭಾವದ ಬಗ್ಗೆ ಪಶು ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ. ಈ ಆನೆಗಳ ಪಟ್ಟಿಯನ್ನು ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.