ಕರ್ನಾಟಕ

karnataka

ETV Bharat / state

ಬಾಗಿನ ಮೊರ ತಯಾರಕರಿಗಿಲ್ಲ ಸ್ವರ್ಣಗೌರಿ ಸಂಭ್ರಮ - Mora manufacturers

ಪ್ರತಿವರ್ಷ ಗೌರಿ ಹಬ್ಬದಂದು ಮೊರದಲ್ಲಿ ಬಾಗಿನ ನೀಡುವ ಸಂಪ್ರದಾಯವಿದೆ. ಈ ವರ್ಷದಲ್ಲಿ ಕೊರೊನಾದಿಂದಾಗಿ ಈ ಸಂಭ್ರಮಕ್ಕೆ ಕಡಿವಾಣ ಬಿದ್ದಿದೆ. ಹೀಗಾಗಿ ಮೊರ ತಯಾರಿಕಾ ಕುಟುಂಬಗಳೀಗ ಸಂಕಷ್ಟಕ್ಕೆ ಸಿಲುಕಿವೆ.

winnowing basket manufacturers suffers from lack of selling product in covid suituation
ಬಾಗಿನ ಮೊರ ತಯಾರಕರಿಗಿಲ್ಲ ಸ್ವರ್ಣಗೌರಿ ಸಂಭ್ರಮ...ಹಬ್ಬದಂದೇ ಜೀವನ ಇನ್ನಷ್ಟು ದುರ್ಗಮ

By

Published : Aug 21, 2020, 4:59 PM IST

ಮೈಸೂರು: ರಾಜ್ಯಾದ್ಯಂತ ಸ್ವರ್ಣಗೌರಿಯ ಹಬ್ಬ ಸಂಭ್ರಮ ಮನೆ ಮಾಡಿದ್ದರೆ, ಮೊರ, ಕುಕ್ಕೆ ತಯಾರಕರ ಬದುಕು ಕೊರೊನಾ ಆರ್ಭಟದಿಂದ ದುರ್ಗಮ ಹಾದಿ ಹಿಡಿದಿದೆ.

ವರ್ಷದಲ್ಲಿ ಗೌರಿ ಹಬ್ಬದ ಹಿಂದಿನ ದಿನ ಮೈಸೂರಿನ ಅಗ್ರಹಾರ, ನಂಜುಮಳಿಗೆ ವೃತ್ತ, ಬಂಬೂ ಬಜಾರ್ ವೃತ್ತದ ಬಳಿ ಬಾಗಿನ ಮೊರ ತಯಾರು ಮಾಡಿ, ಮಾರಾಟ ಮಾಡುವ ಮೂಲಕ ನಾಲ್ಕಾಸು ಸಂಪಾದಿಸಿ ತಮ್ಮ ಹಳ್ಳಿಗಳಿಗೆ ಹಿಂತಿರುಗಬೇಕು ಎಂಬ ಆಸೆಯಿಂದ ಬಂದವರಿಗೆ ಕೊರೊನಾ ಅಡ್ಡಗಾಲು ಹಾಕಿದೆ.

ಬಾಗಿನ ಮೊರಗಳನ್ನು ಕೇಳುವವರಿಲ್ಲ!

ಕೊರೊನಾ ಸೋಂಕಿನಿಂದಾಗಿ ಬಾಗಿನ ಅರ್ಪಿಸಲು ಬೇಕಾಗುವ ಮೊರಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬೆವರು ಸುರಿಸಿ ಗಂಟೆಗಟ್ಟಲೆ ಕುಳಿತು ತಯಾರಿಸಿರುವ ಮೊರಗಳನ್ನು ಕೇಳುವರೇ ಇಲ್ಲದಂತಾಗಿದೆ.

ನಂಜನಗೂಡು ಪಟ್ಟಣದಿಂದ 10ಕ್ಕೂ ಹೆಚ್ಚು ಕುಟುಂಬಗಳು ಗೌರಿ ಹಬ್ಬದ ಹಿಂದಿನ ದಿನ ಅಗ್ರಹಾರ ಬಳಿ ಆಗಮಿಸಿ ಬೆಳಗ್ಗೆಯಿಂದ ಸಂಜೆಯವರೆಗೆ ಬಾಗಿನ ಮೊರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಪ್ರತಿವರ್ಷ ಇವುಗಳ ಖರೀದಿಗೆಂದು ಜನ ಗಿಜಿಗುಡುತ್ತಿದ್ದರು. ಆದರೆ ಕೊರೊನಾ ಆತಂಕಕ್ಕೆ ಒಳಗಾಗಿ ಜನರು ಖರೀದಿಗೆ ಹಿಂಜರಿಯುತ್ತಿದ್ದು ತಯಾರಕರ ಬದುಕಿಗೆ ಸಂಚಕಾರ ತಂದಿದೆ.

ABOUT THE AUTHOR

...view details