ಮೈಸೂರು: ಕುರಿ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ.
ಕುರಿಗಾಯಿ ಮೇಲೆ ಏಕಾಏಕಿ ಎರಗಿದ ಕಾಡುಹಂದಿ - etv bharat
ಕುರಿ ಕಾಯುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾಡುಹಂದಿ ದಾಳಿ ನಡೆಸಿದೆ. ಜಮೀನನ ಪೊದೆಯಲ್ಲಿದ್ದ ಕಾಡುಹಂದಿ ಈತನ ಮೇಲೆ ಏಕಾಏಕಿ ಎರಗಿದ್ದು ವ್ಯಕ್ತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ಸೇರಿಸಲಾಗಿದೆ.
ಕಾಡುಹಂದಿ ದಾಳಿಗೊಳಗಾದ ರಂಗಸ್ವಾಮಿ
ಇಂದು ಬೆಳಗ್ಗೆ ಬದನವಾಳು ಗ್ರಾಮದ ರಂಗಸ್ವಾಮಿ ಎಂಬ ವ್ಯಕ್ತಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ.ಈ ವೇಳೆ ಜಮೀನಿನ ಪೊದೆಯಲ್ಲಿದ್ದ ಕಾಡುಹಂದಿ ಈತನ ಮೇಲೆ ಏಕಾಏಕಿ ಎರಗಿದೆ. ಪರಿಣಾಮ ರಂಗಸ್ವಾಮಿಯ ತೊಡೆ ಭಾಗಕ್ಕೆ ಪೆಟ್ಟಾಗಿದ್ದು, ತಕ್ಷಣ ಈತನನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆ ಸೇರಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.