ಕರ್ನಾಟಕ

karnataka

ETV Bharat / state

ಸಹೋದರರು ಹಾಗೂ ಬಾವನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ - ಮೈಸೂರು ಕೊಲೆ ಪ್ರಕರಣ

ಸೋಮವಾರ ತಡರಾತ್ರಿ ಕೆಂಪಶೆಟ್ಟೆಯ ಪತ್ನಿ ಶಶಿರೇಖಾ ತನ್ನ ಸಹೋದರರು ಹಾಗೂ ಬಾವ ರಮೇಶನ ಜೊತೆ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

wife-kills-husband-with-the-help-of-relatives
wife-kills-husband-with-the-help-of-relatives

By

Published : Jun 29, 2021, 9:54 AM IST

ಮೈಸೂರು: ಸಹೋದರರು, ಬಾವನೊಂದಿಗೆ ಸೇರಿ ತನ್ನ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಇಲವಾಲ ಹೋಬಳಿಯ ಭದ್ರಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹಿಬ್ಜಾಲ ಗ್ರಾಮದ ಕೆಂಪಶೆಟ್ಟಿ (35) ಕೊಲೆಯಾದವರು.

ಪತ್ನಿ ಶಶಿರೇಖಾ, ಸಂಬಂಧಿಗಳಾದ ಕೆಂಡಶೆಟ್ಟಿ, ರಮೇಶ್, ನಾಗೇಂದ್ರ ಎಂಬವರೇ ಚಾಕುವಿನಿಂದ ಹತ್ಯೆ ಮಾಡಿದ್ದಾರೆ. 12 ವರ್ಷಗಳ ಹಿಂದೆ ಕೆಂಪಶೆಟ್ಟಿ ಮತ್ತು ಎಚ್‌ಡಿಕೋಟೆ ತಾಲೂಕಿನ ಹೊಸಹುಂಡಿ ಗ್ರಾಮದ ಶಶಿಕಲಾ ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರು ವರ್ಷಗಳಿಂದ ಕೂರ್ಗಳ್ಳಿಯಲ್ಲಿ ವಾಸವಾಗಿದ್ದರು.

ಮೃತ ಕೆಂಪಶೆಟ್ಟಿ

ಕೆಂಪಶೆಟ್ಟಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಶಶಿಕಲಾ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಕೆಂಪಶೆಟ್ಟಿ, ಶಶಿಕಲಾ ಶೀಲ ಶಂಕಿಸುತ್ತಿದ್ದ ಎನ್ನಲಾಗಿದೆ. ಹಾಗಾಗಿ ಇಬ್ಬರ ನಡುವೆ ಪದೇ ಪದೆ ಜಗಳವಾಗುತ್ತಿತ್ತು. ಎರಡು ಬಾರಿ ಈತ ಹೆಂಡತಿಯ ಮೇಲೆ ಹಲ್ಲೆಗೆ ಯತ್ನಿಸಿದ್ದು, ಒಮ್ಮೆ ಮೂರು ತಿಂಗಳ ಕಾಲ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಬಳಿಕ ಹೆಂಡತಿಯಿಂದ ಪ್ರತ್ಯೇಕವಾಗಿದ್ದ ಕೆಂಪಶೆಟ್ಟಿ ಪದೇ ಪದೇ ಹೆಂಡತಿ ಮನೆಯ ಬಳಿ ಗಲಾಟೆ ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದೆ.

ಸೋಮವಾರ ತಡರಾತ್ರಿ ಕೂರ್ಗಳ್ಳಿಯ ತನ್ನ ಹೆಂಡತಿಯ ಮನೆಯ ಬಳಿ ಬಂದಿರುವ ಕೆಂಪಶೆಟ್ಟೆಯನ್ನ ಶಶಿರೇಖಾ ಸಹೋದರರಾದ ಕೆಂಡಶೆಟ್ಟಿ, ನಾಗೇಂದ್ರ, ಬಾವ ರಮೇಶ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಸ್ಥಳಕ್ಕೆ ಡಿಸಿಪಿ ಪ್ರದೀಪ ಗುಂಟಿ, ಎನ್‌ಆರ್ ವಿಭಾಗದ ಎಸಿಪಿ ಶಿವಶಂಕರ್, ವಿಜಯನಗರ ಇನ್ಸ್‌ಪೆಕ್ಟರ್ ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details