ಮೈಸೂರು: ನನ್ನನ್ನು ಸ್ಕ್ರ್ಯಾಪ್ ಮಾಡೋಕೆ ಹೋಗಿ ನಿವ್ಯಾಕೆ ಸ್ಕ್ರ್ಯಾಪ್ ಆಗ್ತಿರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಕೌಂಟರ್ ಕೊಟ್ಟಿದ್ದಾರೆ.
ನನ್ನ ಬಗ್ಗೆ ಮಾತನಾಡಿ ನೀವ್ ಯಾಕ್ ಸ್ಕ್ರ್ಯಾಪ್ ಆಗ್ತಿರಾ: ಹೆಚ್ಡಿಕೆಗೆ ವಿಶ್ವನಾಥ್ ಟಾಂಗ್ - ನನ್ನನ್ನು ಸ್ಕ್ರ್ಯಾಪ್ ಮಾಡೋಕೆ ಹೋಗಿ ನಿವ್ಯಾಕೆ ಸ್ರ್ಯಾಪ್ ಆಗ್ತಿರಾ
ಉಪ ಚುನಾವಣೆಯ ನಿಮಿತ್ತ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಹೆಚ್.ವಿಶ್ವನಾಥ್, ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹೇಳಿಕೆ ನೀಡಿದ್ದ ಸ್ಕ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಎಚ್.ವಿಶ್ವನಾಥ್ ಪ್ರತಿಕ್ರಿಯೆ
ಹುಣಸೂರು ತಾಲೂಕಿನ ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರನ್ನು ನೋಡಲು ಹೋದಾಗ ಪರಿಚಯವಿದ್ದ ವ್ಯಕ್ತಿಯೊಬ್ಬರು ಸಿಎಂ ಭೇಟಿ ಮಾಡಿಸಿ ಎಂದಿದ್ದಕ್ಕೆ ನಾನು ಹೇಳಿದ್ದೆ ಅಷ್ಟೆ. ಅದರಿಂದ ನಾನು ಕಮಿಷನ್ ಪಡೆಯುವ ಅಗತ್ಯವಿಲ್ಲ. ಅಂತಹ ಸಣ್ಣ ವ್ಯಕ್ತಿಯಲ್ಲ. ದೊಡ್ಡ ತಪ್ಪು ಇದ್ರೆ ಹೇಳಿ, ಸಣ್ಣ ವ್ಯಕ್ತಿಯಾಗಬೇಡಿ ಎಂದು ಕುಮಾರಸ್ವಾಮಿಗೆ ಕುಟುಕಿದರು.
ನಾನು ಮಂತ್ರಿಯಾಗಬೇಕೆಂದು ಆಸೆ ಪಟ್ಟಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಸಲಹೆಗಾರನಾಗಿ ಇರಬೇಕು ಎಂದುಕೊಂಡಿದ್ದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರು ಸೇರಿ ಹೊರ ಹೋಗುವಂತೆ ಮಾಡಿದರು ಎಂದರು.