ಕರ್ನಾಟಕ

karnataka

ETV Bharat / state

ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡುವುದೇಕೆ?:  ವನ್ಯಜೀವಿ ತಜ್ಞರು ಹೇಳೋದೇನು? - ವಿಶ್ವ ಹುಲಿ ದಿನ

ಇಂದು ವಿಶ್ವ ಹುಲಿ ದಿನ. ಈ ದಿನವನ್ನು ಏಕೆ ಆಚರಿಸುತ್ತಾರೆ. ಬಂಡೀಪುರ ಭಾಗದಲ್ಲಿ ಹುಲಿಗಳ ಸಂಖ್ಯೆ ಏಕೆ ಹೆಚ್ಚಿದೆ?. ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡುವುದು ಏಕೆ ಎಂಬ ಬಗ್ಗೆ ವನ್ಯಜೀವಿ ತಜ್ಞರಾದ ರಾಜಕುಮಾರ ಡಿ. ಅರಸು ಏನ್​ ಹೇಳಿದ್ದಾರೆ. ಅವರ ವಿಶೇಷ ಸಂದರ್ಶನ ಇಲ್ಲಿದೆ..

ವನ್ಯಜೀವಿ ತಜ್ಞರಾದ ರಾಜಕುಮಾರ ಡಿ. ಅರಸು
ವನ್ಯಜೀವಿ ತಜ್ಞರಾದ ರಾಜಕುಮಾರ ಡಿ. ಅರಸು

By

Published : Jul 29, 2022, 5:38 PM IST

ಮೈಸೂರು: ಇಂದು ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿಯ 'ವಿಶ್ವ ಹುಲಿ ದಿನ'. ವಿಶ್ವ ಹುಲಿ ದಿನವನ್ನು ಇಂದು ಆಚರಿಸುವ ವಿಶೇಷತೆ ಏನೆಂದರೆ, ಹಿಂದೆ ದೇಶ ಮತ್ತು ರಾಜ್ಯದಲ್ಲಿ ಹುಲಿಗಳ ಸಂಖ್ಯೆ ತುಂಬಾ ಕಡಿಮೆಯಿತ್ತು. ಅಂದರೆ ದೇಶದಲ್ಲೇ 53, ರಾಜ್ಯದಲ್ಲಿ 5 ಹುಲಿಗಳು ಮಾತ್ರ ಇದ್ದವು. ಆದರೆ, ಈಗ ಹುಲಿಗಳ ಸಂಖ್ಯೆ ಹೆಚ್ಚಾಗಿ, ಬಂಡೀಪುರ ಮತ್ತು ನಾಗರಹೊಳೆ ಪ್ರದೇಶಗಳಲ್ಲಿ 173 ಹುಲಿಗಳಿವೆ. ಈಗ ಬಂಡೀಪುರದಲ್ಲಿ 173 ಹುಲಿಯಿದ್ದು, ರಾಜ್ಯದಲ್ಲಿ 524 ಹುಲಿಗಳಿವೆ.

ಹುಲಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ದಟ್ಟವಾದ ಕಾಡುಗಳಿದ್ದು, ಹೆಚ್ಚಾಗಿ ಮಳೆಯಾಗುತ್ತದೆ. ಮಳೆಯಿಂದ ನೀರಿನ ಸಂಗ್ರಹ ಹೆಚ್ಚಾಗುತ್ತದೆ. ಇದು ಮನುಷ್ಯರಿಗೆ ಮತ್ತೊಂದು ರೀತಿ ಸಹಾಯವಾಗುತ್ತದೆ ಎನ್ನುತ್ತಾರೆ ವನ್ಯಜೀವಿ ತಜ್ಞರಾದ ರಾಜಕುಮಾರ್ ಡಿ. ಅರಸು.

ವನ್ಯಜೀವಿ ತಜ್ಞರಾದ ರಾಜಕುಮಾರ ಡಿ. ಅರಸು

ಮನುಷ್ಯರ ಮೇಲೆ ಹುಲಿಗಳು ದಾಳಿ ಮಾಡುವುದೇಕೆ?:ಇತ್ತೀಚೆಗೆ ಹುಲಿ ಸಂರಕ್ಷಿತ ಕಾಡು ಪ್ರದೇಶಗಳ ಒತ್ತುವರಿ ಜಾಸ್ತಿಯಾಗಿದ್ದು, ಹುಲಿ ಸಂತತಿ ಮತ್ತೊಂದು ಕಡೆ ಜಾಸ್ತಿಯಾಗಿದೆ. ಈ ಸಂದರ್ಭದಲ್ಲಿ ಹುಲಿ ತಮ್ಮ ಪ್ರದೇಶಗಳನ್ನು ಗುರುತು ಮಾಡಲು ಕಾಡುಗಳು ಕ್ಷೀಣಿಸುತ್ತಿದ್ದು, ಆ ಸಂದರ್ಭದಲ್ಲಿ ಕಾಡಿನಿಂದ ಹೊರಗೆ ಬರುವ ಹುಲಿಗಳು ಮನುಷ್ಯನ ಮೇಲೆ ದಾಳಿ ಮಾಡುತ್ತವೆ ಎಂಬುದು ಒಂದು ಕಾರಣ.

ಇದನ್ನೂ ಓದಿ:Tiger Day Special: ಹುಲಿಜಿಲ್ಲೆ ಚಂದ್ರಪುರ.. ಇಲ್ಲಿವೆ 250 ಟೈಗರ್ಸ್​​​

ಮತ್ತೊಂದು ಕಾರಣ ಎಂದರೆ ವಯಸ್ಸಾದ ಹುಲಿಗಳು ತಮ್ಮ ಜಾಗವನ್ನು ಗುರುತಿಸಿಕೊಳ್ಳಲು ವಿಫಲವಾದಾಗ ಆಹಾರ ಅರಸಿ ಕಾಡಿನಿಂದ ಹೊರಗೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ. ಆ ಸಂದರ್ಭದಲ್ಲಿ ಜಾನುವಾರು ರಕ್ಷಣೆ ಮಾಡಲು ಮನುಷ್ಯ ಹೋದಾಗ ಆಕಸ್ಮಿಕವಾಗಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಯಾವಾಗಲೂ ಹುಲಿ ನರ ಭಕ್ಷಕ ಅಲ್ಲ ಎಂದು ವನ್ಯ ಜೀವಿತಜ್ಞ ಹಾಗೂ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಶನ್ ಮುಖ್ಯಸ್ಥ ರಾಜಕುಮಾರ್ ಡಿ. ಅರಸು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details