ಕರ್ನಾಟಕ

karnataka

ETV Bharat / state

ತಂದೆ ಕೊಂದವನ ಜತೆ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ - ಸಿಎಂ ನಡೆಗೆ ಹೆಚ್‌ ವಿಶ್ವನಾಥ್ ವ್ಯಾಖ್ಯಾನ - ಸಿಪಿವೈ​ಗೆ ಮಂತ್ರಿಗಿರಿ ಕೊಡಲು ಅರ್ಜೆಂಟ್ ಯಾಕೆ?

ಸಿಎಂ ಯಡಿಯೂರಪ್ಪಗೆ ಅರುಳೋ, ಮರುಳೋ ಅಥವಾ ರಾಜಕೀಯ ಒತ್ತಡವೋ ಗೊತ್ತಿಲ್ಲ. ಬಾಂಬೆ, ಪುಣೆಯಲ್ಲಿ ಸೂಟ್​ಕೇಸ್ ಹಿಡಿದುಕೊಂಡು ತಿರುಗಾಡುತ್ತಿದ್ದ ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ ಕೊಡಲು ಅರ್ಜೆಂಟ್ ಯಾಕೆ? ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

H.vishwanath
ಹೆಚ್.ವಿಶ್ವನಾಥ್

By

Published : Dec 2, 2020, 1:11 PM IST

ಮೈಸೂರು: ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಅರುಳೋ, ಮರುಳೋ ಅಥವಾ ರಾಜಕೀಯ ಒತ್ತಡವೋ? ‌ಸಿ ಪಿ ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೆ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್‌ ಪ್ರಶ್ನಿಸಿದ್ದಾರೆ.

ಸಿಪಿವೈಗೆ ಮಂತ್ರಿಪಟ್ಟ ಕೊಡಲು ಅರ್ಜೆಂಟ್ ಯಾಕೆ?
ತಮ್ಮ ನಿವಾಸದಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ಸಿ ಪಿ ಯೋಗೇಶ್ವರ್ ಅವರೇನು ಮೈತ್ರಿ ಸರ್ಕಾರ ಬೀಳಿಸೋಕೆ ಕಾರಣರಾದವ್ರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವ್ರೇ? ಅವರು ಬಾಂಬೆ, ಪುಣೆಯಲ್ಲಿ ಸೂಟ್‌ಕೇಸ್ ಹಿಡಿದುಕೊಂಡು ಓಡಾಡುತ್ತಿದ್ದವರು.

ಅವರನ್ನ ಮಂತ್ರಿ ಮಾಡೋಕೆ ಅಷ್ಟೊಂದು ಅರ್ಜೆಂಟ್ ಯಾಕೆ ಬೇಕು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನೂ ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು?.

ಯತ್ನಾಳ್ ಅಥವಾ ಕತ್ತಿಯಂತಹ ನಾಯಕರು ಸಾಲಿನಲ್ಲಿದ್ದಾರೆ. ಅವರಿನ್ನು ಮಂತ್ರಿ ಮಾಡಿ ಎಂದು ಸಿಎಂಗೆ ಸಲಹೆ ನೀಡಿದರು. ಸಿಪಿವೈ ನಂತವರನ್ನು ಮಂತ್ರಿ ಮಾಡುವಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ ಎಂದು ಸಿಎಂ ವಿರುದ್ಧ ಗುಡುಗಿದರು.

ರಾಜಕಾರಣವೇ ಉಸಿರು
ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಸಮಾನವಾಗಿ ಹೋಗಬೇಕು. ನಕಾರಾತ್ಮಕ ರಾಜಕಾರಣವನ್ನ ಮಾಡಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ‌ ರಾಜಕಾರಣವೇ ಉಸಿರು. ಇತ್ತೀಚೆಗೆ ಆ ಉಸಿರು ಹೆಚ್ಚೆಚ್ಚು ಹಾಳಾಗುತ್ತಿದೆ. ಇದರಿಂದಾಗಿಯೇ ಜನರು ಜನಪ್ರತಿನಿಧಿಗಳನ್ನ ಅಸಹ್ಯವಾಗಿ ನೋಡ್ತಿದ್ದಾರೆ ಎಂದರು.

ನಾನು ಒಂಟಿಯಲ್ಲ
ಬಾಂಬೆ ಟೀಂ‌ನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರೂ ಜೊತೆಯಾಗಿದ್ದಾರೆ. ನಾವಿದ್ದೀವಿ ಅಂತಾ ಬಿಜೆಪಿ ಹಿರಿಯ ನಾಯಕರು ಧೈರ್ಯ ತುಂಬಿದ್ದಾರೆ. ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‌ವೈ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‌ವೈ ನಡವಳಿಕೆಗಳೇ ಬೇರೆ ಎಂದು ಸಿಎಂ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕೃತಜ್ಞತೆ ಕಡಿಮೆಯಾಗ್ತಿದೆ
ಇತ್ತೀಚಿನ ರಾಜಕಾರಣದಲ್ಲಿ‌ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನ ಯಾರೂ ನೆನಪು ಮಾಡಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರ ಮೇಲೆ ಒತ್ತಡವಿರಬಹುದು. ಅದಕ್ಕೆ ಈಗ ಏನಾಗುತ್ತೆ ಅಂತಾ ನೋಡಿಕೊಂಡು ತೀರ್ಮಾನ ಮಾಡ್ತೀವಿ ಎಂದು ಹೇಳಿದರು.

ತಂದೆಯನ್ನ ಕೊಂದವನ ಜತೆ ತಾಯಿ ಮದುವೆ:

ತಂದೆಯನ್ನ ಕೊಂದವನ ಜತೆಯೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ನಾವು ವಿರೋಧಿಸಿದವರೇ ಈಗ ಯಡಿಯೂರಪ್ಪನವರ ಸ್ನೇಹಿತರಾಗಿದ್ದಾರೆ ಎಂದು ಷೇಕ್ಸ್​ಪಿಯರ್ ನಾಟಕದ ಸಾಲುಗಳನ್ನು ಉಲ್ಲೇಖಿಸಿ ಮಾರ್ಮಿಕವಾಗಿ ನುಡಿದರು.

ABOUT THE AUTHOR

...view details