ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಸಾಹಿತಿ ಎಸ್ ಎಲ್ ಭೈರಪ್ಪ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತ ಚಾಲನೆ ನೀಡಿದ್ರು.
ಮಹಿಷ ದಸರಾ ಆಚರಣೆ ಮಾಡ ಹೊರಟವರ ವಿರುದ್ಧ ಬಿಜೆಪಿ ಸಚಿವತ್ರಯರಿಂದ ವಾಗ್ದಾಳಿ..
ಮಹಿಷ ದಸರಾ ಆಚರಣೆ ಮಾಡ ಹೊರಟವರ ವಿರುದ್ಧ ಬಿಜೆಪಿಯ ಸಚಿವರುಗಳು ವಾಗ್ದಾಳಿ ನಡೆಸಿದ್ದಾರೆ. ಇಂತಹ ಮನಸ್ಥಿತಿಯವರಿಗೆ ಆ ತಾಯಿಯೇ ಬುದ್ಧಿ ನೀಡಲಿ ಎಂದು ಬಿಜೆಪಿ ಸಚಿವರುಗಳು ಹೇಳಿದ್ದಾರೆ.
ಇದೇ ವೇಳೆ ಮಹಿಷ ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಸದಾನಂದಗೌಡ ಅವರು, ಮಹಿಷ ದಸರಾ ಆಚರಣೆಮಾಡುವವರಿಗೆಆ ತಾಯಿಯೇ ಒಳ್ಳೇ ಬುದ್ಧಿ ಕೊಡಲಿ. ಒಳ್ಳೆಯ ದಿನಗಳನ್ನು ಸೃಷ್ಟಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಚಾಮುಂಡಿ ತಾಯಿ ದುಷ್ಟರಿಗೆ ಸದ್ಬುದ್ಧಿ ಕೊಡ್ಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದ್ರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇದೊಂದು ವಿಕೃತ ಮನಸ್ಥಿತಿ. ಲಕ್ಷಾಂತರ ಜನರು ಭಕ್ತಿಯಲ್ಲಿರುವ ವೇಳೆ, ಕೇವಲ ಅವರು ಸುದ್ದಿಯಲ್ಲಿರಲು ಹೀಗೆಲ್ಲ ಮಾಡುತ್ತಿದ್ದಾರೆ. ಇದನ್ನ ನಾನು ಉಗ್ರ ಶಬ್ಧದಿಂದ ಖಂಡಿಸುತ್ತೇನೆ ಎಂದರು.
ಇನ್ನು, ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಚಿವ ಸಿ ಟಿ ರವಿ, ಮಹಿಷ ದಸರಾ ಆಚರಣೆ ಮಾಡಲು ಹೊರಟವರು ರಾಕ್ಷಸ ಮನಸ್ಥಿತಿಯವರು. ಈಗ ರಾಕ್ಷಸರಿಲ್ಲ. ಆದರೆ, ಸಂಸ್ಕೃತಿ ಆಚರಣೆಗೆ ವಿರುದ್ಧವಾಗಿ ಅಪನಂಬಿಕೆ ಸೃಷ್ಟಿಸುವ ರಾಕ್ಷಸ ಮನಸ್ಥಿತಿಯವರು ಇದ್ದಾರೆ. ಅವರ ಮನೋಭಾವ ಬದಲಾಗಬೇಕು ಎಂದ್ರು.