ಕರ್ನಾಟಕ

karnataka

ETV Bharat / state

ಬಿಡುತ್ತಿಲ್ಲ ಕೊರೊನಾ: ಕೆ-ಸೆಟ್ ಪರೀಕ್ಷೆ ಯಾವಾಗ?

ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು ನಡೆಸುವ ಯಾವ ಮುನ್ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆ ನೀಡದೆ ಇರುವುದರಿಂದ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ.

By

Published : Jul 9, 2020, 7:00 PM IST

K set exam
K set exam

ಮೈಸೂರು:ಕೊರೊನಾದಿಂದಾಗಿ ಈಗಾಗಲೇ 2 ಬಾರಿ ಕೆ-ಸೆಟ್ ಪರೀಕ್ಷೆ ಮುಂದೂಡಲ್ಪಟ್ಟಿದ್ದು, ಈ ತಿಂಗಳ ಜುಲೈ 19ಕ್ಕೆ ಪರೀಕ್ಷೆ ನಡೆಯಬೇಕು. ಆದ್ರೆ ಪರೀಕ್ಷೆ ನಡೆಸುವ ಯಾವ ಮುನ್ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆ ನೀಡದೆ ಇರುವುದರಿಂದ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಉಂಟಾಗಿದೆ.

ಎರಡು ಬಾರಿ ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು ಕೊರೊನಾ ಕಾರಣ ಮುಂದೂಡಲಾಗಿದೆ. ಕಳೆದ ಏಪ್ರಿಲ್ 12ರಂದು ಪರೀಕ್ಷೆ ನಡೆಯಬೇಕಿತ್ತು. ನಂತರ ಜೂನ್ 21ಕ್ಕೆ ನಿಗದಿಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷಾ ದಿನಾಂಕವನ್ನು ಮುಂದೂಡಲಾಯಿತು. ಈ ತಿಂಗಳ ಜುಲೈ 19ಕ್ಕೆ ಪರೀಕ್ಷೆ ನಿಗದಿ ಮಾಡಿದ್ದು, ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ಶಿಕ್ಷಣ ಇಲಾಖೆ ನೀಡಿಲ್ಲ. ಇದರಿಂದ ಈ ಬಾರಿಯೂ ಪರೀಕ್ಷೆ ನಡೆಯುತ್ತೋ, ಇಲ್ಲವೋ ಎಂಬ ಪ್ರಶ್ನೆ ಅಭ್ಯರ್ಥಿಗಳಲ್ಲಿ ಎದುರಾಗಿದೆ.

2018ರಲ್ಲಿ ಕೆ-ಸೆಟ್ ಪರೀಕ್ಷೆಗೆ 94 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಸುಮಾರು 1 ಲಕ್ಷದ 4,900 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲೇ 20 ಸಾವಿರ ಮಂದಿ ಅರ್ಜಿ ಸಲ್ಲಿಕೆ: ಕೆ-ಸೆಟ್ ಪರೀಕ್ಷೆಗೆ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯಾದ್ಯಂತ ಪರೀಕ್ಷೆ ನಡೆಸಲು 11 ನೋಡಲ್ ಕೇಂದ್ರಗಳನ್ನು ಓಪನ್ ಮಾಡಲಾಗಿತ್ತು. ಪರೀಕ್ಷೆಗೆ ಅರ್ಜಿ ಹಾಕಿದ ಜಿಲ್ಲೆಗಳಲ್ಲಿ ಮೈಸೂರು ಜಿಲ್ಲೆಯವರು 20 ಸಾವಿರ ಮಂದಿ ಇದ್ದು, ಬೆಂಗಳೂರು ನಗರದ 18 ಸಾವಿರ ಮಂದಿ ಹಾಗೂ ಉಳಿದ ಇತರ ಜಿಲ್ಲೆಗಳಲ್ಲಿ 5ರಿಂದ 7 ಸಾವಿರ ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಕೆ-ಸೆಟ್ ಪರೀಕ್ಷೆ ಸಿದ್ಧತೆಗೆ 15 ದಿನಗಳು ಬೇಕು:ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದ್ದರೂ ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿದಲ್ಲಿ 15 ದಿನಗಳ ಸಿದ್ಧತೆ ಬೇಕಾಗುತ್ತದೆ. ಏಕೆಂದರೆ ಪ್ರಶ್ನೆ ಪತ್ರಿಕೆ ಮುದ್ರಣ, ಇನ್ನಿತರ ವಿಚಾರದಲ್ಲಿ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಪರೀಕ್ಷಾ ಕೇಂದ್ರಗಳ ವಿವರ, ಸಿಬ್ಬಂದಿ ನೇಮಕ ಇವುಗಳಿಗೆ ಸಮಯ ಬೇಕಾಗುತ್ತದೆ.

ಜುಲೈ 19ರಂದು ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಬರೆದಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲದೆ ಇರುವುದರಿಂದ ಮತ್ತೊಂದು ದಿನಾಂಕ ನಿಗದಿಪಡಿಸುವುದು ಅನಿವಾರ್ಯವಾಗುತ್ತದೆ ಎಂದು ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ ಈಟಿವಿ ಭಾರತ್​​ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details