ಮೈಸೂರು:ಅರಮನೆಯಲ್ಲಿ ದಸರಾ ಆಚರಣೆಯ ಸಿದ್ಧತೆಗಳು ಗಣೇಶ ಹಬ್ಬದ ನಂತರ ಆರಂಭವಾಗುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಇಂದು ಮೈಸೂರಿನ ಆಕಾಶವಾಣಿ ಕೇಂದ್ರದಲ್ಲಿ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಅವರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಒಡೆಯರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಅರಮನೆಯಲ್ಲಿ ದಸರಾ ಸಿದ್ಧತೆಯು ಗಣೇಶ ಹಬ್ಬದ ನಂತರ ಆರಂಭವಾಗಲಿದ್ದು, ಸರ್ಕಾರದ ವತಿಯಿಂದ ಆರಂಭವಾಗುವ ದಸರಾ ಈ ಬಾರಿ ತಡವಾಗಿ ಆರಂಭವಾಗಿದೆ. ಅದಕ್ಕೆಲ್ಲ ಕಾರಣ ನಿಮಗೆ ಗೊತ್ತು. ಆದರೂ ಸರ್ಕಾರ ಈಗ ಸಿದ್ಧತೆ ಆರಂಭಿಸಿದೆ ಎಂದರು.
ಸರಳ ದಸರಾ ನಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನಾನು ಹೆಚ್ಚಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಉಂಟಾದ ಮಹಾಮಳೆಯ ದುರಂತಕ್ಕೆ ಬೇಸರ ವ್ಯಕ್ತ ಪಡಿಸಿದ ಪ್ರಮೋದಾದೇವಿ ಒಡೆಯರ್, ನಾವು ಹೆಚ್ಚಾಗಿ ಮಳೆ ಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.
ಶ್ರೀಜಯಚಾಮ ರಾಜೇಂದ್ರ ಒಡೆಯರ್ ಶತಮಾನೋತ್ಸವ.. ಆದರೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಈ ಮಳೆ ಎಲ್ಲೋ ಒಂದು ಕಡೆ ಮನುಷ್ಯನೇ ಮಾಡಿದ ತಪ್ಪುಗಳಿಂದ ಆಗಿದೆ. ಮನುಷ್ಯ ಪರಿಸರದ ಮೇಲೆ ಮಾಡಿದ ದಾಳಿಗೆ ಈ ರೀತಿ ಪರಿಣಾಮ ಉಂಟಾಗಿದೆ ಎಂದು ಪ್ರವಾಹದಲ್ಲಿ ಬದುಕು ಕಳೆದುಕೊಂಡವರ ಬಗ್ಗೆ ಬೇಸರ ವ್ಯಕ್ತಪಡಿಸಿದರು.