ಕರ್ನಾಟಕ

karnataka

ETV Bharat / state

ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ: ಸದಾನಂದಗೌಡ ವಿಶ್ವಾಸ - ಹುಣಸೂರು ಉಪ ಚುನಾಚಣೆ ಸುದ್ದಿ

ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Central minister Sadananda Gowda press meet in hunasuru, ಸದಾನಂದಗೌಡ ಸುದ್ದಿಗೋಷ್ಠಿ
ಸದಾನಂದಗೌಡ ಸುದ್ದಿಗೋಷ್ಠಿ

By

Published : Nov 27, 2019, 9:41 PM IST

ಮೈಸೂರು:ಭಾರತೀಯ ಜನತಾ ಪಕ್ಷದ ಕಡೆಗೆ ಜನರ ಒಲವಿದೆ. ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ನಾವು ಗೆಲ್ಲಲಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್​.ವಿಶ್ವನಾಥ್​ಗೆ ನಾನು ಈ ಮೊದಲೇ ಬಿಜೆಪಿಗೆ ಬರುವಂತೆ ಹೇಳಿದ್ದೆ. ಕೊನೆಗೂ ಆ ಕಾಲ ಕೂಡಿ ಬಂದಿದೆ. ಹುಣಸೂರಿನ ಅಭಿವೃದ್ಧಿ ಕಾರ್ಯಕ್ಕೆ ಯಡಿಯೂರಪ್ಪ ಸರ್ಕಾರ ಶ್ರಮಿಸಲಿದೆ ಎಂದು ಹೇಳಿದರು.

ಹುಣಸೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸುದ್ದಿಗೋಷ್ಠಿ

ಈ ಭಾಗದಲ್ಲಿ ಕೆಲವರು ಜಾತಿ ಲೆಕ್ಕಾಚಾರದ ಮೇಲೆ ಗೆಲುವು ಸಾಧಿಸಬಹುದು ಎಂಬ ನಂಬಿಕೆ ಹೊಂದಿದ್ದಾರೆ. ಆದರೆ ಜಾತಿ ಆಧಾರದ ಮೇಲೆ ಕ್ಷೇತ್ರ ಅಭಿವೃದ್ಧಿಯಾಗಲ್ಲ ಎಂದು ಜನರಿಗೆ ತಿಳಿದಿದೆ. ಅದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಹೀಗಾಗಿ ಬಿಜೆಪಿಯತ್ತ ಜನರ ಅಭಿಮತವಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಇನ್ನು ತಾನು ದೇವರಾಜು ಅರಸು ಅವರ ಪ್ರತಿರೂಪ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆದರೆ ಮುಖ್ಯಮಂತ್ರಿಯಾಗಿದ್ದ ಅವರನ್ನು ಮೈಸೂರಿನ ಜನರು ಸ್ವಕ್ಷೇತ್ರದಿಂದಲೇ ಹೊರ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದರು.

For All Latest Updates

TAGGED:

ABOUT THE AUTHOR

...view details