ಕರ್ನಾಟಕ

karnataka

ETV Bharat / state

ಜಿಟಿ ದೇವೇಗೌಡ್ರು ಕಾಂಗ್ರೆಸ್​ಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತ ಕೋರುತ್ತೇನೆ: ಶಾಸಕ ತನ್ವೀರ್ ಸೇಠ್ - GT Devegowda join congress

ಜಿಟಿಡಿ ಮತ್ತು ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಬಗ್ಗೆ ಮಾತನಾಡಿದ ಅವರು, ದೇವೇಗೌಡ್ರು ನಾನು ರಾಜಕಾರಣಕ್ಕೆ ಬರುವ ಮುನ್ನವೇ ಸ್ನೇಹಿತರು. ಅವರು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಅವರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇನ್ಮುಂದೆಯೂ ಬರಲ್ಲ, ಅವರೂ ನಮ್ಮ ಜೊತೆ ಬಂದರೆ ಇನ್ನೂ ಖುಷಿಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

By

Published : Nov 11, 2021, 5:45 AM IST

ಮೈಸೂರು: ಶಾಸಕ ಜಿ.ಟಿ. ದೇವೇಗೌಡ ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುವುದಾದರೆ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಜಿಟಿಡಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಗೊತ್ತಿಲ್ಲ, ರಾಜಕಾರಣ ನಿಂತ ನೀರಲ್ಲ. ಅದು ಹರಿಯುತ್ತಿರಬೇಕು. ನಾನು ಹಿಂದೆಯೇ ಹೇಳಿದ್ದೇನೆ, ಜಿಟಿ ದೇವೇಗೌಡರು ಮನಸ್ಸು ಮಾಡಿ, ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುವುದಾದರೆ, ಅವರನ್ನ ನಾನು ಅತ್ಯಂತ ನಮ್ರತೆಯಿಂದ ಸ್ವಾಗತ ಮಾಡುತ್ತೇನೆ. ಆದರೆ ಇದರ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್​ ನಿರ್ಧರಿಸಲಿದೆ. ಅವರು ಬಂದರೆ ಕಾಂಗ್ರೆಸ್​ ಸೇರಿದರೆ ಪಕ್ಷಕ್ಕೆ ಬಲ ಬರಲಿದೆ ಎಂದರು.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ಜಿಟಿಡಿ ಮತ್ತು ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಬಗ್ಗೆ ಮಾತನಾಡಿದ ಅವರು, ದೇವೇಗೌಡ್ರು ನಾನು ರಾಜಕಾರಣಕ್ಕೆ ಬರುವ ಮುನ್ನವೇ ಸ್ನೇಹಿತರು. ಅವರು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಅವರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇನ್ಮುಂದೆಯೂ ಬರಲ್ಲ, ಅವರೂ ನಮ್ಮ ಜೊತೆ ಬಂದರೆ ಇನ್ನೂ ಖುಷಿಯಾಗಲಿದೆ ಎಂದು ಹೇಳಿದರು.

ನಮ್ಮ ಭಾವನೆಗಳ ಜೊತೆ ಸರ್ಕಾರಗಳು ಆಟವಾಡಬಾರದು:

ಸರ್ಕಾರ ಯಾವುದೇ ಇರಲಿ, ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಬಾರದು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸಮಾದಿಯಿದೆ, ಅದೊಂದು ಪ್ರವಾಸಿ ತಾಣ, ಅಂತಹ ಜಾಗದಲ್ಲೂ ನಿಷೇದಾಜ್ಞೆ ಮಾಡಿದ್ದಾರೆ. ನಾವೇನು ಅರ್ಜಿ ಹಾಕಿ ಜಯಂತಿ ಮಾಡಿ ಎಂದು ಕೇಳಿರಲಿಲ್ಲ, ಅದನ್ನು ನಿಷೇಧ ಮಾಡಿ ಎಂದು ಹೇಳಿರಲಿಲ್ಲ. ಆದರೆ ಅವರ ಭಾವನೆಗೆ ತಕ್ಕಂತೆ ಆದೇಶಗಳನ್ನು ಜಾರಿ ಮಾಡುತ್ತಾರೆ. ಮತ್ತೆ ನಿಷೇಧ ಮಾಡುತ್ತಾರೆ. ಸಮಾಜ ಹಿಂದಿನಿಂದಲೂ ಟಿಪ್ಪುವಿನ ಜನ್ಮದಿನ ಮತ್ತು ಟಿಪ್ಪು ವೀರ ಮರಣ ಹೊಂದಿದ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಹಾಗಾಗಿ ನಮ್ಮ ಪಾಡಿಗೆ ಆಚರಿಸಲು ಬಿಡಿ. ಆದರೆ ನಮ್ಮ ಭಾವನೆಗಳ ಜೊತೆ ಆಟ ಆಡುವುದನ್ನು ನಿಲ್ಲಿಸಲಿ, ನಾನು ನಮ್ಮ ಕಾಂಗ್ರೆಸ್​ ಸರ್ಕಾರವನ್ನಾಗಲಿ ಅಥವಾ ಯಾವುದೇ ಸರ್ಕಾರಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಲು ಕೇಳಿಕೊಳ್ಳುವುದಿಲ್ಲ. ಆದರೆ ನಮ್ಮ ಹಿರಿಯರನ್ನು ನೆನೆಪಿಸಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಪಾಡಿಗೆ ಬಿಡಿ ಎಂದು ಹೇಳಿದರು.

ಇದನ್ನು ಓದಿ:ಒಂದೇ ವೇದಿಕೆಯಲ್ಲಿ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ: ರಾಜಕೀಯ ಲೆಕ್ಕಾಚಾರಗಳೇನು?

ABOUT THE AUTHOR

...view details