ಮೈಸೂರು: ರಸ್ತೆ ಪಕ್ಕದಲ್ಲಿರುವ ಕೆಲವು ದೇವಾಲಯಗಳು ಹೋಗುತ್ತವೆ. ಕಾನೂನಡಿ ಉಳಿಸಿಕೊಳ್ಳಬಹುದಾದ, ಸ್ಥಳಾಂತರ ಮಾಡಬಹುದಾದ ದೇವಸ್ಥಾನಗಳನ್ನು ತೆರವು ಮಾಡಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ತೀರ್ಪಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ದೇವಾಲಯಗಳನ್ನು ತೆರವು ಮಾಡುವುದಿಲ್ಲ. ಕಾನೂನಡಿ ಉಳಿಸಿಕೊಳ್ಳಬಹುದಾದ, ಸ್ಥಳಾಂತರ ಮಾಡಬಹುದಾದ ದೇವಾಲಯಗಳನ್ನು ತೆರವು ಮಾಡಲ್ಲ. ಮಸೀದಿ, ಚರ್ಚ್, ಹಿಂದೂ ಮಂದಿರ ಇರಲಿ ಅದೆಲ್ಲವೂ ಅಕಾಮಡೇಟ್ ಮಾಡ್ತೇವಿ ಎಂದರು.
ದೇವಾಲಯ ತೆರವು ವಿಚಾರಕ್ಕೆ ನಿಮ್ಮ ಪಕ್ಷದ ಸಂಸದರು ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ನನ್ನದೇ ಆದ ಮಿತಿ ಇರುತ್ತದೆ. ಅವರ(ಪ್ರತಾಪಸಿಂಹ) ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯವೇ ಬೇರೆ. ನಾವುಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಮೈಸೂರು ನಗರದ ಎಲ್ಲ ದೇವಾಲಯಗಳ ತೆರವು ಮಾಡಲ್ಲ. ನಾವು ಜಿಲ್ಲಾಡಳಿತಕ್ಕೆ ಸಹಕಾರ ಕೊಡುತ್ತಿದ್ದೇವೆ ಎಂದೇಳಿದರು.