ಕರ್ನಾಟಕ

karnataka

ETV Bharat / state

ಅಗತ್ಯ ಬಿದ್ದರೆ ದಸರಾದಲ್ಲಿ ಭಾಗವಹಿಸುವ ಆನೆಗಳಿಗೂ ಕೊರೊನಾ ಟೆಸ್ಟ್ : ಡಿಸಿಎಫ್ - Mysore dasara latest news

ಈ ಬಾರಿ ನಡೆಯುವ ಸರಳ ಹಾಗೂ ಸಂಪ್ರದಾಯಿಕ ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಅಗತ್ಯ ಬಿದ್ದರೆ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.

Mysore
Mysore

By

Published : Sep 12, 2020, 7:48 PM IST

ಮೈಸೂರು:ವಿದೇಶದ ಮೃಗಾಲಯವೊಂದರಲ್ಲಿ ಹುಲಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದಸರಾಗೆ ಬರುವ ಆನೆಗಳಿಗೂ ಹಾಗೂ ಮಾವುತನಿಗೂ ಕೊರೊನಾ ಟೆಸ್ಟ್ ಮಾಡಿಸಲಾಗುವುದು ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.

ಸರಳ ದಸರಾದಲ್ಲಿ ಪಾಲ್ಗೊಳ್ಳುವ 5 ಆನೆಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆನೆ ಕ್ಯಾಂಪ್​​​ನಿಂದ ಮೈಸೂರಿಗೆ ಬರುವ ಮುನ್ನ ಮಾವುತ, ಕಾವಾಡಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್​ ಟೆಸ್ಟ್ ಮಾಡಿಸಲು ತೀರ್ಮಾನಿಸಲಾಗದೆ. ಅಗತ್ಯ ಬಿದ್ದರೆ ಆನೆಗಳಿಗೂ ಟೆಸ್ಟ್ ನಡೆಸಲು ಇಲಾಖೆ ಉದ್ದೇಶಿಸಿದೆ. ಏಕೆಂದರೆ ಅಮೆರಿಕದ ಮೃಗಾಲಯದ ಹುಲಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚರ ವಹಿಸಲಾಗಿದೆ ಎಂದರು.

ಸರ್ಕಾರದ ಮಾರ್ಗಸೂಚಿಯಂತೆ ಮಾವುತ, ಕಾವಾಡಿ ಹಾಗೂ ಕುಟುಂಬ ಸದಸ್ಯರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತದೆ. ಎಲ್ಲಿಯೂ ಆನೆಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿಲ್ಲ. ಆದರೂ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಅಗತ್ಯ ಕ್ರಮಕೈಗೊಂಡಿದ್ದು,‌ ತಜ್ಞರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದರೆ ಆನೆಗಳಿಗೂ ಟೆಸ್ಟ್ ಮಾಡಿಸುತ್ತೇವೆ ಎಂದು ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.

ABOUT THE AUTHOR

...view details