ಮೈಸೂರು:ನಮ್ಮನ್ನು ಗೆಲ್ಲಿಸುವುದು ಕಾರ್ಯಕರ್ತರು. ಈಗ ಅಂತಹ ನಿಮ್ಮಗಳ ಚುನಾವಣೆ ಬಂದಿದೆ. ಹೀಗಾಗಿ ನಿಮ್ಮ ಋಣ ತೀರಿಸುವ ಸಂದರ್ಭ ನಮಗೆ ಈಗ ಬಂದಿದೆ. ನಾವು ನಿಮ್ಮ ಚುನಾವಣೆಗೆ ಶ್ರಮಿಸುತ್ತೇವೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮುಡುಕನಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನೀಗ 2ನೇ ಬಾರಿಗೆ ಜಿಲ್ಲಾ ಪ್ರವಾಸ ಮಾಡಿದ್ದೇನೆ. ಈ ಮೊದಲು 10 ವರ್ಷಕ್ಕೆ ಇದ್ದ ಮೀಸಲಾತಿಯನ್ನು 5 ವರ್ಷಕ್ಕೆ ಇಳಿಸಲಾಗಿದೆ. ಹೈಕೋರ್ಟ್ ತೀರ್ಪು ಪ್ರಕಟವಾದ 4-5 ದಿನಗಳೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಬಹುದು. ಹೀಗಾಗಿ ನಾವು ಅದಕ್ಕೆ ಸಿದ್ಧವಾಗಬೇಕಿದೆ ಎಂದರು.