ಮೈಸೂರು :ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಖುಲಾಸೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕಿದಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಹೇಳಿದರು.
ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುತ್ತಾರೆ.. ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್ ಆಪಾದನೆ - We dont expect good from siddaraimha
ಬಾಬ್ರಿ ಮಸೀದಿ ಧ್ವಂಸ ವಿಚಾರವಾಗಿ ಸಿಬಿಐ ನ್ಯಾಯಾಲಯ, ಎಲ್ಲರನ್ನು ಖುಲಾಸೆಗೊಳಿಸಿರುವುದು ದೇಶದ ಐತಿಹಾಸಿಕ ದಿನವಾಗಿದೆ..
ಗಣೇಶ್ ಕಾರ್ಣಿಕ್
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬುದ್ಧಿಜೀವಿಗಳು, ಸ್ವಯಂ ಘೋಷಿತ ಇತಿಹಾಸ ತಜ್ಞರು, ಕಮ್ಯೂನಿಷ್ಟ್ ವಿಚಾರವಾದಿಗಳು ಯಾವಾಗ ಬಾಬ್ರಿ ಮಸೀದಿ ಕಟ್ಟಡ ಧ್ವಂಸವಾಯಿತೋ ಅಂದಿನಿಂದ ಈವರೆಗೆ ಇದರ ವಿರುದ್ಧ ನಿರಂತರ ಧ್ವನಿ ಎತ್ತಿದ್ದರು. ಅಂತಹ ಧ್ವನಿಗಳಿಗೆ ಸಿದ್ದರಾಮಯ್ಯ ಧ್ವನಿಯಾಗಿದ್ದಾರೆ. ಅವರಿಂದ ಒಳ್ಳೆಯ ನಿರೀಕ್ಷೆ ಸಾಧ್ಯವಿಲ್ಲ ಎಂದರು.
ಬಾಬ್ರಿ ಮಸೀದಿ ಧ್ವಂಸ ವಿಚಾರವಾಗಿ ಸಿಬಿಐ ನ್ಯಾಯಾಲಯ, ಎಲ್ಲರನ್ನು ಖುಲಾಸೆಗೊಳಿಸಿರುವುದು ದೇಶದ ಐತಿಹಾಸಿಕ ದಿನವಾಗಿದೆ ಎಂದರು.