ಮೈಸೂರು: ಕೇರಳದ ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಗುರುವಾರ ರಾತ್ರಿ ಕಬಿನಿ ಜಲಾಶಯಕ್ಕೆ 22,180 ಕ್ಯೂಸೆಕ್ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕಬಿನಿ ಜಲಾಶಯದಿಂದ ಗುರುವಾರ ತಡರಾತ್ರಿ 30,800 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
30,800 ಕ್ಯೂಸೆಕ್ ನೀರು ಕಬಿನಿಯಿಂದ ಹೊರಕ್ಕೆ.. ಸ್ಥಳೀಯರಿಗೆ ನೆರೆ ಭೀತಿ..! - ಮೈಸೂರಿನ ಬೀಚನಹಳ್ಳಿ
ನಿರಂತರ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆ 30,800 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಶುರುವಾಯ್ತು ಪ್ರವಾಹ ಭೀತಿ
ಇದನ್ನೂ ಓದಿ:ಮಹಾಮಳೆ: ಇದೇ ಮೊದಲ ಬಾರಿಗೆ ಜ್ಯೋತಿರ್ಲಿಂಗ ಜಲಾವೃತ
ಕಬಿನಿ ಜಲಾಶಯ ಮುಂಭಾಗ ಇರುವ ಸೇತುವೆ ಮುಳುಗಡೆಯಾಗಿರುವುದರಿಂದ ಬೀಚನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬಳಸಿಕೊಂಡು ಗ್ರಾಮದಿಂದ ಗ್ರಾಮಕ್ಕೆ ತೆರಳುವಂತಾಗಿದೆ. ಸೇತುವೆ ಮೇಲೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಜಲಾಶಯದ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಾಗಿದ್ದು, ಜನರಲ್ಲಿ ನೆರೆ ಭೀತಿ ಉಂಟಾಗಿದೆ.