ಮೈಸೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳಿಗೆ ಬಿಡುತ್ತಿದ್ದ ನೀರು ನಿಲ್ಲಿಸಿರುವುದರಿಂದ ಜಾನುವಾರು, ಅನ್ನದಾತರ ಗತಿಯೇನು ಎಂಬ ಪ್ರಶ್ನೆ ಗ್ರಾಮಾಂತರ ಪ್ರದೇಶದ ವಲಯಗಳಲ್ಲಿ ಕೇಳಿ ಬರುತ್ತಿದೆ. ಬೇಸಿಗೆ ಆರಂಭವಾದರೆ ನೀರನ್ನು ಎಲ್ಲಿ ಹುಡುಕುವುದು ಎಂಬ ಚಿಂತೆಯಾಗಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...! ಕಬಿನಿ, ತಾರಕ ಹಾಗೂ ನುಗು ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡದೇ ನಿಲ್ಲಿಸಿರುವುದರಿಂದ 130 ಹಳ್ಳಿಗಳಿಗೆ ನೀರಿನ ಹಾಹಾಕಾರ ಕಾಡ ತೊಡಗಿದೆ. ಹಿಂಗಾರಿನ ವಾತಾವರಣ ಕಡಿಮೆಯಾಗುತ್ತಿದ್ದ ವೇಳೆಗಾಗಲೇ ಮುಂಗಾರಿನ ಮಳೆವರೆಗೆ ನಾಲೆಗಳಲ್ಲಿ ತಳ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು.
ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...! ಬೋರ್ವೆಲ್ ನೀರಲ್ಲದೆ ಜಲಾಶಯಗಳ ಹಿನ್ನೀರಿನ ಪ್ರದೇಶಗಳಿಗೆ ತೆರಳಿ ಬಟ್ಟೆ, ಜಾನುವಾರಗಳ ನೀರಿಗಾಗಿ ಅವಲಂಭಿಸುವಂತಾದರೆ, ಕೆಲವರು ನೀರು ಇರುವ ಕಡೆ ಹುಡುಕಿ ಹತ್ತಾರು ಕಿ.ಮೀ. ದೂರದಿಂದ ನೀರು ತರುವಂತಾಗಿದೆ. ಏಪ್ರಿಲ್ ತಿಂಗಳ ಮೊದಲ ವಾರದವರೆಗೆ ನಾಲೆಗಳಿಗೆ ತಳಮಟ್ಟದಲ್ಲಿಯಾದರೂ ನೀರು ಹರಿಸಿದರೆ ಜಾನುವಾರುಗಳನ್ನು ರೋಗ ರುಜಿನಗಳಿಂದ ಕಾಪಾಡಬಹುದು ಎಂಬ ಮಾತು ಗ್ರಾಮಸ್ಥರದ್ದಾಗಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...! ಆದರೆ ಇಷ್ಟು ಬೇಗ ನಾಲೆಗಳಲ್ಲಿ ನೀರು ನಿಲ್ಲಿಸಿರುವುದರಿಂದ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಬೇಸರವಾಗದೆ. ಮೂರು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆ ಇದ್ದರೂ ನಾಲೆಗಳಲ್ಲಿ ನೀರಿನ ಕೊರತೆ ಇರಲಿಲ್ಲ. ಕಳೆದ ಬಾರಿ ಭಾರಿ ಮಳೆಯಿಂದ ಎಲ್ಲ ಜಲಾಶಯಗಳು ಭರ್ತಿಯಾಗಿ ನೀರನ್ನು ಹೊರಬಿಡಲಾಗಿದೆ. ಸಂಗ್ರಹಿಸಿಟ್ಟಿರುವ ನೀರು ಈಗ ಬಿಡಲು ಅಧಿಕಾರಿಗಳ ಮೀನಾಮೇಷವೇಕೆ ಎಂಬ ಪ್ರಶ್ನೆ ಎದ್ದಿದೆ.
ಬೇಸಿಗೆ ಆರಂಭಕ್ಕೂ ಮುನ್ನವೇ ನಾಲೆಗಳೆಲ್ಲಾ ಖಾಲಿ ಖಾಲಿ...!