ಮೈಸೂರು:ಸೈಬರ್ ಕಳ್ಳರು ಕೊರೊನಾ ವಾರಿಯರ್ಸ್, ಆರೋಗ್ಯಾಧಿಕಾರಿಗಳು ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದಾರೆ. ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಅಂತಾ ಹೇಳಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನ ಪಡೆದು ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಒಟಿಪಿ ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಎಸ್ಪಿ ಆರ್. ಚೇತನ್ ಸಲಹೆ ನೀಡಿದ್ದಾರೆ.
ಇಷ್ಟು ದಿನ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು, ನಿಮ್ಮ ಖಾತೆಗೆ ಬಹುಮಾನ ಬಂದಿದೆ. ನಿಮ್ಮ ಬ್ಯಾಂಕ್ ಸಂಖ್ಯೆ ಹೇಳಿ ಎಂದು ನಂಬರ್ ತೆಗೆದುಕೊಂಡು ಜನರನ್ನು ವಂಚಿಸಿ, ಅವರ ಖಾತೆಯಿಂದ ಹಣ ಕಳವು ಮಾಡುತ್ತಿದ್ದರು. ಆದರೆ ಈಗ ಕೋವಿಡ್ ಹೆಸರಿನಲ್ಲಿ ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಎಂದು ಹೇಳಿ ಒಟಿಪಿ ಮತ್ತು ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಾಗಾಗಿ ಸಾರ್ವಜನಿಕರು ಮೊಬೈಲ್ ಒಟಿಪಿ ಕೊಡುವಾಗ ಎಚ್ಚರ ವಹಿಸಿ ಎಂದು ಎಸ್ಪಿ ಸಲಹೆ ನೀಡಿದ್ದಾರೆ.