ಕರ್ನಾಟಕ

karnataka

ETV Bharat / state

160 ಜನರ ವರದಿ ಬಂದರೆ ಜುಬಿಲಂಟ್​​ನ ಎಲ್ಲರ ಪರೀಕ್ಷೆ ಕಂಪ್ಲೀಟ್​: ಡಿಸಿ

ಜುಬಿಲಂಟ್​​ ಕಾರ್ಖಾನೆಯಲ್ಲಿ 2000 ಕ್ಕಿಂತಲೂ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗಿದೆ. ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆ ಮುಗಿದಿದೆ. ಇಂದು 160 ಜನರ ಗಂಟಲು ದ್ರವ ಕಳುಹಿಸಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಅಭಿರಾಮ್ ಜಿ.ಶಂಕರ್
ಅಭಿರಾಮ್ ಜಿ.ಶಂಕರ್

By

Published : Apr 20, 2020, 2:07 PM IST

ಮೈಸೂರು: ಜುಬಿಲಂಟ್​​ ಕಾರ್ಖಾನೆಯಲ್ಲಿನ 160 ಜನರ ಪರೀಕ್ಷೆಯ ವರದಿ ಬಂದರೆ ಇಡೀ​ ಕಾರ್ಖಾನೆಯ ಸಂಪರ್ಕದಲ್ಲಿದ್ದ ಎಲ್ಲರ ವೈದ್ಯಕೀಯ ಪರೀಕ್ಷೆ ಮುಗಿದಂತಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಬಿಲಂಟ್​​ ಕಾರ್ಖಾನೆಯಲ್ಲಿ 2000 ಕ್ಕಿಂತಲೂ ಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗಿದೆ. ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಎಲ್ಲರ ಗಂಟಲು ದ್ರವಮಾದರಿ ಪರೀಕ್ಷೆ ಮುಗಿದಿದೆ. ಇಂದು 160 ಜನರ ಗಂಟಲು ದ್ರವ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.

2000ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆಯಲ್ಲಿ 60 ಪಾಸಿಟಿವ್ ಬಂದಿದೆ. ಕೆಲವೊಂದು ಪ್ರಾರ್ಥಮಿಕ ಇನ್ನು ಕೆಲವು ದ್ವಿತೀಯ ಸಂಪರ್ಕದ ಮುಖಾಂತರ ಪಾಸಿಟಿವ್ ಪ್ರಕರಣ ಕಂಡು ಬಂದಿವೆ. ಮುಂದಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣ ಕಡಿಮೆ ಆಗುವ ನಿರೀಕ್ಷೆಯಲ್ಲಿ ಇದ್ದೇವೆ ಎಂದ ಅವರು, ಉಸಿರಾಟದ ತೊಂದರೆ ಇರುವವರ ಮಾಹಿತಿ ನೀಡದ ಆಸ್ಪತ್ರೆಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಉಸಿರಾಟದ ತೊಂದರೆ ಪ್ರಕರಣಗಳು ನಮಗೆ ಆತಂಕ ತಂದಿದೆ ಎಂದು ಹೇಳಿದರು.

ಸುಮಾರು 60 ಪ್ರಾಥಮಿಕ ಸಂಪರ್ಕ ಪ್ರಕರಣಗಳು ಮೊಸಂಬಾಯನಹಳ್ಳಿಯ ಸೋಂಕಿತ ವೃದ್ಧೆಯಿಂದಲೇ ಕಂಡುಬಂದಿವೆ. ಎಲ್ಲರನ್ನೂ ಗುರುತಿಸಿ ನಿಗಾದಲ್ಲಿ ಇಡಲಾಗಿದೆ ಎಂದ ಅವರು, ಮೈಸೂರಿನಲ್ಲಿ ತಬ್ಲಿಘಿ ಜಮಾತ್ ಸಂಪರ್ಕದ 88 ಜನರಿದ್ದಾರೆ. ಅದರಲ್ಲಿ 10 ಕೇಸ್ ಪಾಸಿಟಿವ್ ಬಂದಿದೆ. ಉಳಿದ 78 ಕೇಸ್ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ABOUT THE AUTHOR

...view details