ಮೈಸೂರು: ಚುನಾವಣೆ, ಆರ್ಥಿಕತೆ, ಉದ್ಯೋಗ ಭದ್ರತೆ ಇವುಗಳನ್ನು ಭಸ್ಮ ಮಾಡಿದ ನರೇಂದ್ರ ಮೋದಿ ಆಧುನಿಕ ಭಸ್ಮಾಸುರ ಎಂದು ವಿಎಸ್ ಉಗ್ರಪ್ಪ ಕಿಡಿಕಾರಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿರತೆ ಇಲ್ಲ, ಉದ್ಯೋಗವಿಲ್ಲ, ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಸಿಎಎ ಹಾಗೂ ಹಾಗೂ ಭಾವನಾತ್ಮಕ ವಿಷಯಗಳ ಮೂಲಕ ದೇಶವನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಂ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.
ಮೋದಿ ಭಾರತದ ಆಧುನಿಕ ಭಸ್ಮಾಸುರ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಮೋದಿಯವರು ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಬಗ್ಗೆ ಮಾತಾಡ್ತಾರೆ. ಅಫ್ಘಾನಿಸ್ತಾನ, ಪಾಕಿಸ್ತಾನ ಬಾಂಗ್ಲಾದೇಶ ಈ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕೇಂದ್ರ ಸರ್ಕಾರ ಬರ್ಮಾ, ಸಿಲೋನ್, ಮ್ಯಾನ್ಮಾರ್ ಇಂಥ ದೇಶದ ನಿರಾಶ್ರಿತರಿಗೆ ಯಾಕೆ ಪೌರತ್ವ ಕೊಡಲ್ಲ. ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯಬೇಡಿ ಎಂದರು.
ಯಡಿಯೂರಪ್ಪ ಅವರು ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ರು, ಆದರೆ ಚುನಾವಣೆ ಮುಗಿದು ಒಂದು ತಿಂಗಳು ಆಗ್ತಿದೆ. ಅಮಿತ್ ಶಾ ಬಳಿ ಟೈಮ್ ಕೇಳುವುದೇ ಆಗಿದೆ ಹೊರತು ಮಂತ್ರಿ ಮಂಡಲ ವಿಸ್ತರಣೆ ಆಗಿಲ್ಲ ಎಂದರು
ಕೆಪಿಸಿಸಿ ಅಧ್ಯಕ್ಷ ಗಿರಿಗಾಗಿ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತವಿಲ್ಲ. ನಾವು ಇದನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು.