ಕರ್ನಾಟಕ

karnataka

ETV Bharat / state

ಸಂಪುಟ ಪುನಾರಚನೆ ಹಿನ್ನೆಲೆ ಮೈಸೂರಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ - political-activity-is-the-district

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಮತ್ತು ನಾಳೆ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ರಾಜಕೀಯ ವಿದ್ಯಮಾನಗಳು ಮತ್ತಷ್ಟು ಚುರುಕುಗೊಳ್ಳಲಿವೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ರಚನೆ ಆಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಯಾವ ಖಾತೆ ಸಿಗಲಿದೆ? ಮೈಸೂರಿನವರಿಗೆ ಮೈಸೂರು ಉಸ್ತುವಾರಿಯ ಚುಕ್ಕಾಣಿ ಸಿಗಲಿದೆಯಾ ಎಂಬ ಪ್ರಶ್ನೆಗಳು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡತೊಡಗಿದೆ‌.

politica
ರಾಜಕೀಯ

By

Published : Nov 24, 2020, 9:08 AM IST

ಮೈಸೂರು: ಇನ್ನು ಎರಡು ಮೂರು ದಿನಗಳಲ್ಲಿ ಸಂಪುಟ‌ ವಿಸ್ತರಣೆ ಅಥವಾ ಪುನಾರಚನೆ ಆಗುತ್ತಿರುವುದರಿಂದ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರ ಹಾಗೂ ಬುಧವಾರ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ರಾಜಕೀಯ ವಿದ್ಯಮಾನಗಳು ಮತ್ತಷ್ಟು ಚುರುಕುಗೊಳ್ಳಲಿವೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಯಾವ ಖಾತೆ ಸಿಗಲಿದೆ? ಮೈಸೂರಿನವರಿಗೇ ಜಿಲ್ಲೆಯ ಉಸ್ತುವಾರಿ ಚುಕ್ಕಾಣಿ ಸಿಗಲಿದೆಯಾ ಎಂಬ ಪ್ರಶ್ನೆಗಳು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಡತೊಡಗಿವೆ‌.

ಮೈಸೂರಿನಲ್ಲಿ ಗರಿಗೆದರಿದೆ ರಾಜಕೀಯ ಚಟುವಟಿಕೆ

ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಎಚ್.ವಿಶ್ವನಾಥ್ ಅವರ ಪಾತ್ರವು‌ ಪ್ರಮುಖ. ಆದ್ರೆ ನಂತರ ನಡೆದ ಹುಣಸೂರು ಉಪಚುನಾವಣೆಯಲ್ಲಿ ಅವರು ಸೋತರು. ಹೀಗಾಗಿ ವಿಧಾನ ಪರಿಷತ್ ಸ್ಥಾನ ನೀಡಲಾಗಿದೆ.‌ ಇವರಿಗೆ ಮಂತ್ರಿಪಟ್ಟ ಸಿಗಲಿದೆ ಎಂಬ ವಿಶ್ವಾಸ ಇವರ ಬೆಂಬಲಿಗರಿದೆ. ‌ಮಾಜಿ‌ ಸಚಿವ ಹಾಗೂ ಶಾಸಕ ಎಸ್.ಎ. ರಾಮದಾಸ್ ಕೂಡ ಮೈಸೂರು ಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಅಲ್ಲದೇ ಅದಕ್ಕಾಗಿ ಕಸರತ್ತು ಕೂಡ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಿಕ್ಕೆ ಬಂದಾಗ ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದರು‌. ನಂತರ ರಾಜಕೀಯ ವಿದ್ಯಮಾನಗಳ ಬದಲಾವಣೆಯಿಂದ ಎಸ್.ಟಿ.ಸೋಮಶೇಖರ್ ಉಸ್ತುವಾರಿ ಸಚಿವರಾದರು. ಇಬ್ಬರು ಬೆಂಗಳೂರಿನವರೇ ಆಗಿರುವುದರಿಂದ ಮೈಸೂರಿನವರೇ ಜಿಲ್ಲಾ ಉಸ್ತುವಾರಿ ಸಚಿವರಾದರೆ ಅನುಕೂಲವಾಗಲಿದೆ ಎಂಬ ಆಲೋಚನೆ ಜನರದ್ದಾಗಿದೆ.

ಎಚ್.ವಿಶ್ವನಾಥ್ ಹಾಗೂ ಎಸ್.ಎ. ರಾಮದಾಸ್ ಇಬ್ಬರು ಕೂಡ ಮೈಸೂರು ಜಿಲ್ಲಾ ಉಸ್ತುವಾರಿಗಾಗಿ, ಕಸರತ್ತು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪಟ್ಟಿಯಲ್ಲಿ ಯಾರಿಗೆ ಒಲಿಯಲಿದೆ‌ ಅದೃಷ್ಟ ಕಾದು ನೋಡಬೇಕಿದೆ.

ABOUT THE AUTHOR

...view details