ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ಸ್ಥಾಪಿಸಿದ್ದ ವಿಷ್ಣುವರ್ಧನ್ ಪ್ರತಿಮೆ ತೆರವು.. ಪೊಲೀಸರ ವಿರುದ್ಧ ಅಭಿಮಾನಿಗಳ ಪ್ರತಿಭಟನೆ

ನಂಜನಗೂಡು ದೇವಾಲಯ ತೆರವಾದ ಬಳಿಕ ಮತ್ತೀಗ ಮೈಸೂರಿನಲ್ಲಿ ದಿ. ವಿಷ್ಣುವರ್ಧನ್ ಅವರ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಅನಧಿಕೃತವಾಗಿ ಸ್ಥಾಪಿಸಲಾಗಿದ್ದ ಪ್ರತಿಮೆ ತೆರವು ಮಾಡಿದ್ದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

vishuvardhan-fans-protest-over-idol-removed-from-municipality-park-at-mysuru
ರಾತ್ರೋರಾತ್ರಿ ಸ್ಥಾಪಿಸಿದ್ದ ನಟ ವಿಷ್ಟುವರ್ಧನ್ ಪ್ರತಿಮೆ ತೆರವು..ಪೊಲೀಸರ ವಿರುದ್ಧ ಅಭಿಮಾನಿಗಳ ಪ್ರತಿಭಟನೆ

By

Published : Sep 18, 2021, 10:46 AM IST

Updated : Sep 18, 2021, 11:01 AM IST

ಮೈಸೂರು:ನಗರದಲ್ಲಿ ದೇವಸ್ಥಾನ ತೆರವು ಗೊಂದಲ ಸುದ್ದಿಯಾಗಿರುವ ಬೆನ್ನಲ್ಲೇ ಈಗ ಪ್ರತಿಮೆ ಗಲಾಟೆ ಆರಂಭವಾಗಿದೆ. ಪಾಲಿಕೆ ಉದ್ಯಾನವನದಲ್ಲಿ ಅನುಮತಿ ಪಡೆಯದೆ ಸ್ಥಾಪಿಸಲಾಗಿದ್ದ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನ ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

ಮೈಸೂರು ಅರಮನೆ ಬಳಿಯ ಉದ್ಯಾನವನದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಲಾಗಿತ್ತು. ಕಳೆದ 10 ವರ್ಷದಿಂದಲೂ ಇಲ್ಲಿ ಪ್ರತಿಮೆ ಸ್ಥಾಪಿಸಬೇಕು ಎಂಬ ಬೇಡಿಕೆ ಇಡಲಾಗಿತ್ತು. ಸರ್ಕಾರ ಈ ಬಗ್ಗೆ ಸ್ಪಂದಿಸದ ಹಿನ್ನೆಲೆ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿದ್ದರು. ಆದರೆ ಇದು ಅನಧಿಕೃತ ಎಂದು ಪ್ರತಿಮೆಯನ್ನ ಪೊಲೀಸರು ತೆರವುಗೊಳಿಸಿದ್ದು, ಇದರಿಂದ ಕರಳಿದ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಮೈಸೂರಲ್ಲಿ ದೇವಸ್ಥಾನ ತೆರವು ಪ್ರಕರಣ: ಈಶ ವಿಠಲದಾಸ ಸ್ವಾಮೀಜಿ ಖಂಡನೆ

Last Updated : Sep 18, 2021, 11:01 AM IST

ABOUT THE AUTHOR

...view details