ಮೈಸೂರು: ಕೊರೊನಾ ಸೋಂಕು ತಗುಲಿದರೆ ಭಯಪಡಬೇಡಿ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೇಗಿರುತ್ತೆ ಎಂದು ಸೋಂಕಿತನೊಬ್ಬ ಆಸ್ಪತ್ರೆಯಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೇಗಿರುತ್ತೆ: ಸೋಂಕಿತನ ವೈರಲ್ ವಿಡಿಯೋ..! - Corona case in Mysore district
ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ, ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ 2 ಮಾತ್ರೆ ನೀಡುತ್ತಾರೆ. ಮನೆಯಲ್ಲೇ ವಿಶ್ರಾಂತಿ ಪಡೆದರೆ ಸಾಕು ಎಂದು ಸರ್ಕಾರಿ ಆಸ್ಪತ್ರೆಯಿಂದ ಕೊರೊನಾ ಸೋಂಕಿತ ಮೈಸೂರಿನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಪತ್ರಬರಹಗಾರನಿಗೆ 8 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲು ಅವರು ಕೊರೊನಾಗೆ ಹೆಚ್ಚು ಚಿಕಿತ್ಸೆ ನೀಡುವುದಾಗಿ ತಿಳಿದಿದ್ದರು. ಆದರೆ, ಈ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ 2 ಮಾತ್ರೆಗೆ ಮಾತ್ರ ಚಿಕಿತ್ಸೆ ಸೀಮಿತವಾಗಿದೆ. ಸೋಂಕಿತನಿಗೆ ಪಾಸಿಟಿವ್ ಬಂದ ತಕ್ಷಣ ತಾಲೂಕಿನ ವೈದ್ಯಾಧಿಕಾರಿಗಳು ಕರೆ ಮಾಡಿ ನಿಮ್ಮ ವರದಿ ಪಾಸಿಟಿವ್ ಬಂದಿದ್ದು , ಕೋವಿಡ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಎಂದು ತಿಳಿಸಿದ್ದಾರೆ.
ಅದರಂತೆ ಇವರು ನಂಜನಗೂಡು ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಮೊದಲು ಬಿಪಿ, ಶುಗರ್ ಚೆಕ್ ಮಾಡುತ್ತಾರೆ. ನಂತರ 2 ಮಾತ್ರೆ ಕೊಡುತ್ತಾರೆ. ಒಂದು ಮಾತ್ರೆ ನುಂಗಬೇಕು. ಮತ್ತೊಂದು ಮಾತ್ರೆ ಚೀಪಬೇಕು. ಇದನ್ನು ಹೊರತುಪಡಿಸಿ ಊಟ ಕೊಡುತ್ತಾರೆ ಅಷ್ಟೇ. ಇದರ ಬದಲು ನಾವು ಮನೆಯಲ್ಲೆ ಬಿಸಿ ನೀರು, ಊಟ ಮಾಡಿಕೊಂಡು ಇರಬಹುದು ಎಂದು ವಿಡಿಯೋದಲ್ಲಿ ಸೋಂಕಿತ ಹೇಳಿ ಕೊಂಡಿದ್ದಾರೆ.