ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಬಳಲುತ್ತಿರುವ ಈ ಮೂಕ ಬಸವ ನಟ ದರ್ಶನ್​ ಬಂದ್ರೆ ಹುಷಾರಾಗುತ್ತಂತೆ - ಶ್ರೀ ಕಾಳಿಕಾಂಬ ದೇವಾಲಯ

ಕಾಳಮ್ಮನಕೊಪ್ಪಲು ಗ್ರಾಮದ ಬಸವನಿಗೆ ಕಾಲಿಗೆ ಪೆಟ್ಟು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಒಮ್ಮೆ ನಟ ದರ್ಶನ್​ ಒಂದು ಬಸವನನ್ನು ನೋಡಿಕೊಂಡು ಹೋದರೆ ಅದು ಚೇತರಿಸಿಕೊಳ್ಳಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

Cow
ಬಸವ

By

Published : May 1, 2020, 11:55 AM IST

ಮೈಸೂರು:ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ಅಭಿಮಾನಿಗಳಿಗೆ ನಟನನ್ನು ನೋಡಬೇಕು ಎಂಬ ಆಸೆ ಇರುವುದನ್ನು ನಾವು ಕೇಳಿದ್ದೀವಿ ನೋಡಿದ್ದೀವಿ. ಆದರೆ ಅನಾರೋಗ್ಯದಿಂದ ದೇವಸ್ಥಾನದ ಆವರಣದಲ್ಲಿ ಮಲಗಿರುವ ಬಸವ ಚೇತರಿಸಿಕೊಳ್ಳಲು ನಟ ದರ್ಶನ್ ಬಂದರೆ ಬಸವ ಚೇತರಿಸಿಕೊಳ್ಳುತ್ತದೆ ಎಂಬುದು ಗ್ರಾಮಸ್ಥರ ಮನವಿಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೂ ಬಸವನಿಗೂ ಎಲ್ಲಿಯಾ ಸಂಬಂಧ ಅಂತೀರಾ ಈ ಸ್ಟೋರಿ ನೋಡಿ.

ದರ್ಶನ್​ ಬರುವಂತೆ ಮನವಿ ಮಾಡಿದ ಗ್ರಾಮಸ್ಥ

ಕಳೆದ ವರ್ಷ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರಕ್ಕೆ ದರ್ಶನ್ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮ ಬಳಿಯ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ ವೇಳೆ ಪ್ರಚಾರದ ವಾಹನಕ್ಕೆ ಅಡ್ಡಲಾಗಿ ಬಂದ ದೇವಸ್ಥಾನದ ಬಸವನನ್ನು ದರ್ಶನ್ ಹತ್ತಿರಕ್ಕೆ ಹೋಗಿ ಅದರ ಬೆನ್ನು ತಟ್ಟಿದ್ದಾಗ ಯಾವುದೇ ರೀತಿ ಗಲಾಟೆ ಮಾಡದೆ ಅದೇ ದಾರಿ ಬಿಟ್ಟಿತ್ತು , ಆ ಸಂದರ್ಭದಲ್ಲಿ ಇದು ಬಹಳ ದೊಡ್ಡ ಸುದ್ದಿಯಾಗಿತ್ತು.

ಈಗ ಗ್ರಾಮದ ಶ್ರೀ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಕಾಲಿಗೆ ಪೆಟ್ಟು ಬಿದ್ದು ಕಳೆದ ಒಂದು ವಾರದಿಂದ ದೇವಾಲಯದ ಆವರಣದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಬಸವನನ್ನು ನೋಡಲು ದರ್ಶನ್ ಬಂದರೆ ಈ ಬಸವ ಚೇತರಿಸಿಕೊಳ್ಳಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ABOUT THE AUTHOR

...view details