ಮೈಸೂರು:ಸೆರೆ ಹಿಡಿದಿರುವ ಚಿರತೆಯನ್ನು ತೋರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬೀದಿಗಿಳಿದ ಪರಿಣಾಮ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಬಳಿ ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು. ಚಿರತೆಯನ್ನು ತೋರಿಸದ ಕಾರಣ ಅರಣ್ಯ ಇಲಾಖೆ ವಿರುದ್ಧ ಜನರು ಅನುಮಾನ ವ್ಯಕ್ತಪಡಿಸಿದರು. ನಿಜವಾಗಿಯೂ ಚಿರತೆಯನ್ನು ಇಲಾಖೆ ಸೆರೆ ಹಿಡಿದಿದ್ದರೆ, ಗ್ರಾಮಸ್ಥರಿಗೆ ತೋರಿಸುತ್ತಿದ್ದರು. ಈ ರೀತಿ ಗೌಪ್ಯತೆ ಯಾಕೆ ಕಾಪಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು: ಸೆರೆ ಹಿಡಿದ ಚಿರತೆ ತೋರಿಸುವಂತೆ ಗ್ರಾಮಸ್ಥರ ಪಟ್ಟು
ಶಾಸಕ ಅಶ್ವಿನ್ ಕುಮಾರ್ ಸ್ಥಳಕ್ಕಾಗಮಿಸಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಸೆರೆಹಿಡಿದ ಚಿರತೆಯನ್ನು ತೋರಿಸಿದರು.
ಸೆರೆ ಹಿಡಿದಿರುವ ಚಿರತೆ
ಬಳಿಕ ಶಾಸಕ ಅಶ್ವಿನ್ ಕುಮಾರ್ ಸ್ಥಳಕ್ಕಾಗಮಿಸಿ, ಸಾರ್ವಜನಿಕರ ಒತ್ತಾಯದ ಮೇರೆಗೆ ಸೆರೆಹಿಡಿದ ಚಿರತೆಯನ್ನು ತೋರಿಸಿ, ಗ್ರಾಮಸ್ಥರ ಅನುಮಾನ ಬಗೆಹರಿಸಿದರು.
ಇದನ್ನೂ ಓದಿ:ವಿದ್ಯಾರ್ಥಿಯನ್ನು ಬಲಿ ಪಡೆದಿದ್ದ ಚಿರತೆ ಸೆರೆ: ನಿಟ್ಟುಸಿರು ಬಿಟ್ಟ ಜನ...
Last Updated : Dec 23, 2022, 7:10 PM IST