ETV Bharat Karnataka

ಕರ್ನಾಟಕ

karnataka

ETV Bharat / state

ಮೈಸೂರು: ಎರಡು ಮಕ್ಕಳ ತಾಯಿ ಹಳೆ ಲವರ್​ ಜತೆ ಲವ್ವಿ-ಡವ್ವಿ.. ಗ್ರಾಮಸ್ಥರಿಂದ ಯುವಕನಿಗೆ ಧರ್ಮದೇಟು - ಎರಡು ಮಕ್ಕಳ ತಾಯಿಯ ಪ್ರೇಮ ಕಥೆ

ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಯುವಕನಿಗೆ ಗ್ರಾಮಸ್ಥರೇ ಥಳಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Villagers beat to Young man in Mysore, Mysore love story, Mysore crime news, Two child-mother love story, Mysore news, ಮೈಸೂರಿನಲ್ಲಿ ಗ್ರಾಮಸ್ಥರಿಂದ ಯುವಕನಿಗೆ ಥಳಿತ, ಮೈಸೂರು ಪ್ರೇಮ ಕಥೆ, ಮೈಸೂರು ಅಪರಾಧ ಸುದ್ದಿ, ಎರಡು ಮಕ್ಕಳ ತಾಯಿಯ ಪ್ರೇಮ ಕಥೆ, ಮೈಸೂರು ಸುದ್ದಿ,
ಎರಡು ಮಕ್ಕಳ ತಾಯಿಯಾಗಿದರೂ ಲವರ್‌ ಜೊತೆ ಸಂಪರ್ಕ
author img

By

Published : Jan 20, 2022, 1:50 PM IST

ಮೈಸೂರು: ಎರಡು ಮಕ್ಕಳ ತಾಯಿಯಾಗಿದ್ದರೂ ತನ್ನ ಹಳೆಯ ಪ್ರಿಯಕರನ ಜೊತೆಯಲ್ಲಿ ಮಹಿಳೆ ಸಂಪರ್ಕ ಇಟ್ಟುಕೊಂಡಿದ್ದಳು. ಇದನ್ನು ನೋಡಿದ ಗ್ರಾಮಸ್ಥರು ಆಕೆಯ ಪ್ರಿಯಕರನಿಗೆ ಥಳಿಸಿರುವ ಘಟನೆ ಬುಧವಾರ ರಾತ್ರಿ ನಂಜನಗೂಡು ತಾಲೂಕಿನ ಹಳ್ಳಿದಿಟ್ಟ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥರಿಂದ ಯುವಕನಿಗೆ ಥಳಿತ

ಏನಿದು ಘಟನೆ:ಕೊಂತೆಗಾಲ ಗ್ರಾಮದ ಮಹೇಶ್ ಕುಮಾರ್ ಹಲ್ಲೆಗೊಳಗಾದ ಯುವಕ. ಪಿಯುಸಿ ಓದುತ್ತಿದ್ದ ವೇಳೆ ಮಸಗೆ ಗ್ರಾಮದ ಯುವತಿ ಜೊತೆ ಈತನಿಗೆ ಲವ್ ಆಗಿತ್ತು. ಇಬ್ಬರೂ ಮದುವೆ ಆಗುವ ನಿರ್ಧಾರಕ್ಕೆ ಮುಂದಾಗಿದ್ದರು. ಈ ವಿಚಾರ ಯುವತಿ ಮನೆಯವರಿಗೆ ತಿಳಿದಾಕ್ಷಣ ಆಕೆಯ ಕುಟುಂಬಸ್ಥರು ಹಳ್ಳಿದಿಡ್ಡಿ ಗ್ರಾಮದ ಯುವಕನ ಜೊತೆ ಮದುವೆ ಮಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿ ಮುಂದುವರಿದಿತ್ತು ಎನ್ನಲಾಗ್ತಿದೆ.

ಓದಿ:'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ

ಈಗ ಆಕೆ ಎರಡು ಮಕ್ಕಳ ತಾಯಿ. ಆದ್ರೂ ಸಹಿತ ತನ್ನ ಹಳೆಯ ಪ್ರಿಯಕರನ ಜೊತೆ ಸಂಪರ್ಕ ಬೆಳೆಸಿದ್ದಾಳೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂದೂ ಹೇಳಲಾಗ್ತಿದೆ. ಈ ವಿಚಾರ ಆಕೆಯ ಪತಿಗೆ ತಿಳಿದಿದ್ದು, ಆಕೆಯ ಗಂಡ ಗ್ರಾಮಸ್ಥರ ಹಿರಿಯರಿಗೆ ಮಾಹಿತಿ ಮುಟ್ಟಿಸಿದ್ದಾನೆ. ನಂತರ ಯುವಕನಿಗೆ ಬುದ್ಧಿ ಕಲಿಸಬೇಕೆಂದು ಆಕೆಯ ಗಂಡ ಮತ್ತು ಗ್ರಾಮಸ್ಥರು ನಿರ್ಧರಿಸಿದ್ದರು.

ಎರಡು ಮಕ್ಕಳ ತಾಯಿಯಾಗಿದರೂ ಲವರ್‌ ಜೊತೆ ಸಂಪರ್ಕ

ಗ್ರಾಮಸ್ಥರು ಸಂತ್ರಸ್ತನ ಪತ್ನಿ ಮೂಲಕ ಆ ಯುವಕನನ್ನು ಹಳ್ಳಿದಿಡ್ಡಿ ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. ಆಕೆಯಿಂದ ಫೋನ್ ಬಂದಿದ್ದೇ ತಡ, ಯುವಕ ಊರಿಗೆ ದೌಡಾಯಿಸಿದ್ದಾನೆ. ನಂತರ ಗ್ರಾಮಸ್ಥರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾನಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗ್ತಿದೆ. ಆದ್ರೆ ಥಳಿತಕ್ಕೊಳಗಾದ ಯುವಕನಿಂದ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ.

ABOUT THE AUTHOR

...view details