ಮೈಸೂರು:ಆನೆ ಓಡಿಸಲು ಬಂದ ಅರಣ್ಯ ಸಿಬ್ಬಂದಿ ಜೊತೆ ಗ್ರಾಮಸ್ಥರು ತಳ್ಳಾಟ ನಡೆಸಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಸಿಬ್ಬಂದಿ ಕೈಯಲ್ಲಿದ್ದ ಬಂದೂಕು ಕಿತ್ತುಕೊಂಡು, ಅದನ್ನು ಮುರಿದು ಹಾಕಿ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಾಡಂಚಿನ ಗ್ರಾಮ ಬೂದನೂರಿಗೆ ಸೋಮವಾರ ಸಲಗವೊಂದು ನುಗ್ಗಿದ್ದು, ಹಲವು ಮನೆಗಳಿಗೆ ಹಾನಿ ಮಾಡಿದೆ. ಇದನ್ನು ಓಡಿಸಲು ಬಂದಿದ್ದ ಮೇಟಿಕುಪ್ಪೆ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದರು.