ಕರ್ನಾಟಕ

karnataka

ETV Bharat / state

ಮಧ್ಯರಾತ್ರಿಯಿಂದಲೇ 'ವಿಕ್ರಾಂತ್ ರೋಣ' ಅಬ್ಬರ, ಅಭಿಮಾನಿಗಳ ಹರ್ಷೋದ್ಘಾರ - etv bharat kannada

ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್​ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

vikrant-rona-movie-released-in-mysore-tirumakudalu-narasipura
ಮಧ್ಯ ರಾತ್ರಿಯಿಂದಲೇ 'ವಿಕ್ರಾಂತ್ ರೋಣ' ಅಬ್ಬರ: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

By

Published : Jul 28, 2022, 8:38 AM IST

ಮೈಸೂರು:ಕಿಚ್ಚ ಸುದೀಪ್​ ಅಭಿನಯದ'ವಿಕ್ರಾಂತ್ ರೋಣ' ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಜಿಲ್ಲೆಯ ತಿ.ನರಸೀಪುರ ತಾಲೂಕಿನ ಭಗವಾನ್ ಚಿತ್ರಮಂದಿರದಲ್ಲಿ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ನೆಚ್ಚಿನ ನಟನ ಸಿನೆಮಾ ವೀಕ್ಷಣೆಗೆ ಆಗಮಿಸಿದ್ದರು.

ಪಟ್ಟಣದ ವಿಜಯ್ ಭಗವಾನ್ ಚಿತ್ರಮಂದಿರದಲ್ಲಿ ಮಧ್ಯರಾತ್ರಿಯೇ ಚಿತ್ರ ತೆರೆಕಂಡಿತು. ಅಭಿಮಾನಿಗಳು ಪಟಾಕಿ ಸಿಡಿಸಿದರು. ರಾರಾ ರಕ್ಕಮ್ಮ ಹಾಡಿಗೆ ಕುಣಿದು ಕುಪ್ಪಳಿಸಿದರು. ಥಿಯೇಟರ್ ಮುಂಭಾಗ ಸುದೀಪ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿತ್ತು.

ಸಿನೆಮಾ ತಂಡ ಹೇಳಿರುವಂತೆ, ಪ್ರಪಂಚದಾದ್ಯಂತ ಒಟ್ಟಾರೆ 3,200ರಿಂದ 3500 ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ 13ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗುತ್ತಿದೆ. ಶೇ 60ರಷ್ಟು ತ್ರಿಡಿಯಲ್ಲಿ ಹಾಗೂ ತ್ರಿಡಿ ಇಲ್ಲದೆಡೆ ಮಾತ್ರ 2ಡಿ ವರ್ಷನ್ ಪ್ರದರ್ಶನವಾಗಲಿದೆ. ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ಹಲವು ಹಿರಿಯ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ:ಕ್ರೀಮ್ ಸಿನಿಮಾ ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆ ಕಾಲಿಗೆ ಗಾಯ: ವಿಡಿಯೋ

ABOUT THE AUTHOR

...view details