ಮೈಸೂರು:ಲಘು ಹೃದಯಾಘಾತದಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರ ಆರೋಗ್ಯವನ್ನು ಮಾಜಿ ಸಂಸದ ವಿಜಯಶಂಕರ್, ಶಾಸಕ ಎಲ್.ನಾಗೇಂದ್ರ ವಿಚಾರಿಸಿದರು.
ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ - ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯ್ಶಂಕರ್
ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶಾಸಕ ಎಸ್.ಎ. ರಾಮದಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಮಾಜಿ ಸಂಸದ ವಿಜಯಶಂಕರ್, ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
![ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ vijayshankar mla nagendra meets mla ramdas](https://etvbharatimages.akamaized.net/etvbharat/prod-images/768-512-6033912-thumbnail-3x2-surya.jpg)
ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ
ರಾಮದಾಸ್ ಆರೋಗ್ಯ ವಿಚಾರಿಸಿದ ವಿಜಯಶಂಕರ್, ಶಾಸಕ ನಾಗೇಂದ್ರ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿ. ಹೆಚ್. ವಿಜಯಶಂಕರ್, ರಾಮದಾಸ್ ಚೇತರಿಸಿಕೊಳ್ಳುತ್ತಿದ್ದು, ಯಾರು ಆತಂಕಕ್ಕೊಳಗಾಗಬಾರದು. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಅವರು ಬೇಸರಗೊಂಡಿಲ್ಲ. ಒತ್ತಡದಿಂದ ಹೃದಯಾಘಾತವಾಗಿದ್ದು, ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದರು.
ಇದೇ ವೇಳೆ ಶಾಸಕ ನಾಗೇಂದ್ರ ಮಾತನಾಡಿ, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆತಂಕಕ್ಕೊಳ್ಳಗಾಗಬಾರದು. ಎರಡು ದಿನಗಳಲ್ಲಿ ವಾಡ್೯ಗೆ ರಾಮದಾಸ್ ಅವರನ್ನು ಶಿಫ್ಟ್ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆಂದು ತಿಳಿಸಿದರು.