ಮೈಸೂರು:ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಕನಕೋಟೆಯಲ್ಲಿ ಹುಲಿಗಳ ಸರಸ ಸಲ್ಲಾಪದ ಅಪರೂಪದ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದಿದ್ದಾರೆ.
ನಾಗರಹೊಳೆಯ ಕಾಕನಕೋಟೆಯಲ್ಲಿ ಹುಲಿಗಳ ಸರಸ ಸಲ್ಲಾಪದ ಅಪರೂಪದ ದೃಶ್ಯ ಕಬಿನಿ ಹಿನ್ನೀರಿನ ಪ್ರದೇಶದ ಕೆರೆಯೊಂದರ ದಡದಲ್ಲಿ ಹುಲಿಗಳು ಸರಪ ಸಲ್ಲಾಪದಲ್ಲಿ ತೊಡಗಿದ್ದವು. ಹೆಣ್ಣು ಹುಲಿಯನ್ನ ಒಲಿಸಿಕೊಳ್ಳಲು ಗಂಡು ಹುಲಿ ಯತ್ನಿಸುತ್ತಿರುವ ಅಪರೂಪದ ದೃಶ್ಯ ಕಂಡು ಸಫಾರಿಗರು ಮೂಖ ವಿಸ್ಮಿತರಾದರು.
ಇದನ್ನೂ ಓದಿ:ಮೈಸೂರಿನಲ್ಲಿ ಎರಡು ಪ್ರತ್ಯೇಕ ಕಾಡಾನೆ ದಾಳಿ ಪ್ರಕರಣ: ಒಬ್ಬನ ಸಾವು, ಮನೆ ಜಖಂ!
ಹುಲಿ ದಾಳಿಗೆ 2 ಹಸು ಬಲಿ: ಹೊಲದಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ಮಾಡಿ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಮಹದೇವ ನಗರದಲ್ಲಿ ನಡೆದಿದೆ.
ಹುಲಿ ದಾಳಿಗೆ ಹಸು ಬಲಿ: ಕಣ್ಣೀರಿಟ್ಟ ರೈತ ಗ್ರಾಮದ ರೈತ ಪಾಪಣ್ಣ ಮತ್ತು ಸಾಕಮ್ಮ ಎಂಬ ದಂಪತಿಗಳಿಗೆ ಸೇರಿರುವ ಎರಡು ಹಾಲು ಕರೆಯುವ ಹಸುಗಳು ಹುಲಿ ದಾಳಿಗೆ ಮೃತಪಟ್ಟಿದ್ದಾವೆ. ಪಾಪಣ್ಣ ಅವರು ತಮ್ಮ ಕೃಷಿ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಸಂದರ್ಭದಲ್ಲಿ ಹಸುಗಳ ಮೇಲೆ ಹುಲಿ ದಾಳಿ ಮಾಡಿದೆ. ಹಸುಗಳನ್ನು ರಕ್ಷಿಸಲು ಅವರು ಹರಸಾಹಸ ಪಟ್ಟರೂ, ಪ್ರಯೋಜನವಾಗದೇ ತಮ್ಮ ಜೀವ ಉಳಿಸಿಕೊಳ್ಳಲು ಕೂಗಾಡುತ್ತ ಊರಿನತ್ತ ಓಡಿ ಬಂದಿದ್ದಾರೆ.
ದಿನಕ್ಕೆ ಸುಮಾರು 15ಕ್ಕೂ ಹೆಚ್ಚು ಲೀಟರ್ ಹಾಲು ಕರೆದು ಜೀವನ ನಡೆಸುತ್ತಿದ್ದ ರೈತ, ತನ್ನ ಒಂದೂವರೆ ಲಕ್ಷ ರೂ. ಮೌಲ್ಯದ ದ ಹಸುಗಳನ್ನು ಕಳೆದುಕೊಂಡ ಕಂಗಾಲಾಗಿದ್ದಾನೆ. ಘಟನೆ ನಡೆದು 2 ದಿನಗಳು ಕಳೆದರೂ, ಹೆಡಿಯಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ನೀಡುವ ಕೆಲಸ ಮಾಡಿಲ್ಲ ಎಂದು ರೈತ ಬೇಸರ ವ್ಯಕ್ತಪಡಿಸಿದ್ದಾನೆ. ಇನ್ನು ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.