ಕರ್ನಾಟಕ

karnataka

ETV Bharat / state

ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಪರವಾನಗಿ ರದ್ದುಪಡಿಸಿ: ವಿಹೆಚ್‌ಪಿ ಒತ್ತಾಯ - VHP demands clearance of Muslim traders shop in Mysore

ಚಾಮುಂಡಿ ಬೆಟ್ಟದಲ್ಲಿರುವ ಐದು ಮುಸ್ಲಿಂ ಅಂಗಡಿಗಳ ಪರವಾನಗಿ ರದ್ದು ಮಾಡುವಂತೆ ತಹಶೀಲ್ದಾರ್​​ಗೆ ವಿಹೆಚ್‌ಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.

VHP activists appeal to Tahsildar
ತಹಶೀಲ್ದಾರ್​​ಗೆ ವಿಹೆಚ್‌ಪಿ ಕಾರ್ಯಕರ್ತರ ಮನವಿ

By

Published : Mar 26, 2022, 3:51 PM IST

ಮೈಸೂರು: ಶಿವಮೊಗ್ಗ, ಕೊಡಗು ಸೇರಿದಂತೆ ಇತರೆಡೆ ಧಾರ್ಮಿಕ ಸ್ಥಳಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮಾಡಿರುವ ಹಿಂದೂ ಪರ ಸಂಘಟನೆಗಳ ಕೂಗು ಮೈಸೂರಿಗೂ ವ್ಯಾಪಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮುಸ್ಲಿಂ ಧರ್ಮಿಯರ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಒತ್ತಾಯಿಸಿದೆ.

ಮನವಿ ಪತ್ರ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿ ಅಂಗಡಿ ಮುಂಗಟ್ಟುಗಳ ಟೆಂಡರ್‌ಗಳನ್ನ ಹಿಂದೂಯೇತರರಿಗೆ ನೀಡಬಾರದು. ಹೈಕೋರ್ಟ್ ಆದೇಶದಂತೆ ಹಿಂದೂಗಳಿಗೆ ನೀಡಬೇಕು. ಚಾಮುಂಡಿ ಬೆಟ್ಟದಲ್ಲಿರುವ ಐದು ಮುಸ್ಲಿಂ ಧರ್ಮಿಯರ ಅಂಗಡಿಗಳ ಪರವಾನಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಹಶೀಲ್ದಾರ್​​ಗೆ ವಿಹೆಚ್‌ಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಇದನ್ನೂ ಓದಿ:ಏ. 1ರಂದು ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಕಾರ್ಯಕ್ರಮ: ಕೇಂದ್ರ ಸಚಿವ ಅಮಿತ್ ಶಾ ರಿಂದ ಉದ್ಘಾಟನೆ

For All Latest Updates

ABOUT THE AUTHOR

...view details