ಮೈಸೂರು:ಜಿಲ್ಲೆಯಲ್ಲಿಲಾಕ್ಡೌನ್ನಿಂದ ತಳಮಟ್ಟಕ್ಕೆ ಕುಸಿದಿದ್ದ ವಾಹನ ವಲಯ (ಆಟೋಮೊಬೈಲ್ ಕ್ಷೇತ್ರ) ಚೇತರಿಕೆ ಕಾಣುತ್ತಿದೆ. ಮೈಸೂರಿನಲ್ಲಿ ವಾಹನಗಳ ಖರೀದಿ ಬಲು ಜೋರಿದೆ ಎಂದು ಆರ್ಟಿಒ ಅಧಿಕಾರಿಗಳು ನೀಡುತ್ತಿರುವ ಮಾಹಿತಿಯೇ ಅದಕ್ಕೆ ಪುಷ್ಟಿ ನೀಡುವಂತಿದೆ.
ಹಬ್ಬದ ಸೀಸನ್: ಮೈಸೂರಿನಲ್ಲಿ ಚೇತರಿಕೆ ಕಾಣುತ್ತಿದೆ ವಾಹನ ವಲಯ - Corona Lockdown
ಹಬ್ಬದ ಸಂದರ್ಭದಲ್ಲಿ ಮೈಸೂರು ನಗರದ ಆರ್ಟಿಒ ಕಚೇರಿಯಲ್ಲಿ 100 ರಿಂದ 150 ದ್ವಿಚಕ್ರ ವಾಹನ, 15 ರಿಂದ 20 ಕಾರುಗಳು ನೋಂದಣಿಯಾಗುತ್ತಿವೆ ಎಂದು ಮುಖ್ಯ ಆರ್ಟಿಒ ಅಧಿಕಾರಿ ಯಮಕೇಶಪ್ಪ ಹೇಳಿದರು.
![ಹಬ್ಬದ ಸೀಸನ್: ಮೈಸೂರಿನಲ್ಲಿ ಚೇತರಿಕೆ ಕಾಣುತ್ತಿದೆ ವಾಹನ ವಲಯ Vehicle sector recovery in mysore](https://etvbharatimages.akamaized.net/etvbharat/prod-images/768-512-9537250-thumbnail-3x2-sana.jpg)
ಲಾಕ್ಡೌನ್ ಸಂದರ್ಭದಲ್ಲಿ ವಾಹನ ಖರೀದಿ ಸ್ಥಬ್ಧಗೊಂಡಿತ್ತು. ಅನ್ಲಾಕ್ ಬಳಿಕ ಕೋವಿಡ್ ಭೀತಿಯಿಂದಾಗಿ ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿರುವ ಸಾರ್ವಜನಿಕರು ದ್ವಿಚಕ್ರ ವಾಹನ, ಕಾರುಗಳನ್ನು ಖರೀದಿಸಲು ಒಲವು ತೋರುತ್ತಿದ್ದಾರೆ. ಇದು ಮೋಟಾರು ವಾಹನ ಮಾಲೀಕರಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.
ದೀಪಾವಳಿ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ ಕಾರುಗಳ ಮಾರಾಟಕ್ಕೆ ರಿಯಾಯಿತಿ ನೀಡಲಾಗುತ್ತಿದೆ. ಹೀಗಾಗಿ, ವಾಹನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಎರಡು ಹಾಗೂ ಹುಣಸೂರಿನಲ್ಲಿ ಒಂದು ಆರ್ಟಿಒ ಕಚೇರಿಗಳಿವೆ. ಅಂದಾಜು ಪ್ರತಿ ದಿನ 350 ದ್ವಿಚಕ್ರ ವಾಹನ, 50 ಕಾರುಗಳು ನೋಂದಣಿಯಾಗಿವೆ ಎಂದು ಮುಖ್ಯ ಆರ್ಟಿಒ ಅಧಿಕಾರಿ ಯಮಕೇಶಪ್ಪ ತಿಳಿಸಿದರು.