ಮೈಸೂರು: ಕೊರೊನಾ ಎರಡನೇ ಅಲೆ ಅಪ್ಪಳಿಸಲಿದೆ ಎಂಬ ಸುದ್ದಿಗಳ ಭೀತಿಯಿಂದ ತರಕಾರಿ ಕೊಳ್ಳಲು ಹೊರ ರಾಜ್ಯದ ವ್ಯಾಪಾರಸ್ಥರು ಬರದೇ ತರಕಾರಿ ಬೆಲೆ ದಿಢೀರ್ ಕುಸಿತ ಉಂಟಾಗಿದ್ದು ರೈತರು ಕಂಗಲಾಗಿದ್ದಾರೆ.
ಕೊರೊನಾ 2ನೆ ಅಲೆ ಭೀತಿ: ದಿಢೀರ್ ಕುಸಿದ ತರಕಾರಿ ಬೆಲೆಗಳು - ತರಕಾರಿ ಬೆಲೆ ಕುಸಿತ
ಮೈಸೂರು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳಲು ವ್ಯಾಪರಸ್ಥರು ಇಲ್ಲದೇ ತರಕಾರಿಗಳು ಮಾರುಕಟ್ಟೆಯಲ್ಲೇ ಉಳಿದಿದ್ದು, ಬೆಳೆಯನ್ನು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟೊಮೆಟೋ
ಮೈಸೂರಿನ ಎಪಿಎಂಪಿ ಮಾರುಕಟ್ಟೆಗೆ ಮಂಡ್ಯ, ಚಾಮರಾಜನಗರ ಹಾಗೂ ಹಲವು ಭಾಗಗಳಿಂದ ತರಕಾರಿ ಬರುತ್ತದೆ. ಈ ತರಕಾರಿಗಳನ್ನು ಕೊಳ್ಳಲು ಹಲವು ನಗರಗಳಿಂದ ವ್ಯಾಪರಸ್ಥರು ಹಾಗೂ ಮಧ್ಯವರ್ತಿಗಳು ಬರುತ್ತಾರೆ. ಆದರೆ, ಕೊರೊನಾ ಎರಡನೇ ಅಲೆ ಅಪ್ಪಳಿಸಲಿದೆ ಎಂಬ ಸುದ್ದಿಯಿಂದ ಮಾರುಕಟ್ಟೆ ಕಡೆ ಬರುವವರು ಕಡಿಮೆಯಾಗಿದ್ದಾರೆ.
ಕೇರಳದಿಂದ ಬರುತ್ತಿದ್ದ ವ್ಯಾಪಾರಸ್ಥರು ಬಾರದೆ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳು ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಬೆಳೆಯನ್ನು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.