ಕರ್ನಾಟಕ

karnataka

ETV Bharat / state

ತ್ರಿ ಭಾಷಾ ನೀತಿ ಹೇರಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ: ವಾಟಾಳ್​ ಎಚ್ಚರಿಕೆ - kannada news,etv bharat, ತ್ರಿಭಾಷ ನೀತಿ ,ರಾಜ್ಯಾದಾದ್ಯಂತ ,ಉಗ್ರ ಹೋರಾಟ,ವಾಟಳ್​ ನಾಗರಾಜ್, triple policy,ierce struggl,state

ಕೇಂದ್ರ ಸರ್ಕಾರ ಬಲವಂತವಾಗಿ ತ್ರಿ ಭಾಷಾ ನೀತಿ ಹೇರಿದ್ರೆ ರಾಜ್ಯಾದ್ಯಂತ ಉಗ್ರ ಕ್ರಾಂತಿ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಎಚ್ಚರಿಕೆ ರವಾನಿಸಿದ್ದಾರೆ.

ತ್ರಿಭಾಷ ನೀತಿ ಖಂಡಿಸಿ ವಾಟಳ್​ ನಾಗರಾಜ್ ಹೋರಾಟ

By

Published : Jun 4, 2019, 1:37 AM IST

ಮೈಸೂರು: ಕೇಂದ್ರ ಸರ್ಕಾರ ಬಲವಂತವಾಗಿ ತ್ರಿ ಭಾಷಾ ನೀತಿಯನ್ನು ರಾಜ್ಯದ ಮೇಲೆ ಹೇರಿದ್ರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಎಚ್ಚರಿಸಿದ್ದಾರೆ.

ತ್ರಿ ಭಾಷಾ ನೀತಿ ಖಂಡಿಸಿ ವಾಟಾಳ್​ ನಾಗರಾಜ್ ಹೋರಾಟ


ಅವರು ನಗರದ ರೈಲು ನಿಲ್ದಾಣ ಮುಂಭಾಗ ಕಪ್ಪು ಬಟ್ಟೆ ಧರಿಸಿ ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನಮಾನವಿದೆ. ಈ ರಾಜ್ಯದಲ್ಲಿ ಬಲವಂತವಾಗಿ ಹಿಂದಿ ಭಾಷೆ ಹೇರಲು ಮುಂದಾದ್ರೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಕೇಂದ್ರ ಸರ್ಕಾರ ಈ ಧೋರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಇನ್ನು, ಮಹಾರಾಷ್ಟ್ರ ಐಎಎಸ್ ಅಧಿಕಾರಿ ಚೌಧರಿ ಅವರು ಮಹಾತ್ಮಗಾಂಧಿ ಕೊಂದ ನಾಥೂರಾಮ್ ಗೋಡ್ಸೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ಅವರನ್ನು ಮಹಾರಾಷ್ಟ್ರ ಸರ್ಕಾರ ಸೇವೆಯಿಂದ ವಜಾಗೊಳಿಸಬೇಕು. ಕೇಂದ್ರ ಲೋಕಸೇವಾ ಆಯೋಗ ಕೂಡ ಐಎಎಸ್ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ವಾಟಾಳ್​ ಆಗ್ರಹಿಸಿದರು.

ABOUT THE AUTHOR

...view details