ಮೈಸೂರು:ಕೋಲಾರ ಜಿಲ್ಲೆಯ ಚಿನ್ನದ ಗಣಿ ಪ್ರದೇಶ ತಮಿಳರದ್ದಾಗಿದೆ. ತಮಿಳು ನಾಮಫಲಕ ಇರುವ ತಮಿಳುಮಯವಾಗಿರುವ ಕೋಲಾರ ನಗರಸಭೆಯನ್ನು ಸರ್ಕಾರ ವಜಾಗೊಳಿಸಬೇಕು ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಕೋಲಾರ ನಗರಸಭೆ ವಜಾ ಮಾಡಿ: ವಾಟಾಳ್ ನಾಗರಾಜ್ ಒತ್ತಾಯ - ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ
ತಮಿಳು ನಾಮಫಲಕ ಹಾಕಿ ತಮಿಳುಮಯವಾಗಿರುವ ಕೋಲಾರ ನಗರಸಭೆಯನ್ನು ಸರ್ಕಾರ ವಜಾಗೊಳಿಸಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಮೈಸೂರಿನ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುಮಾಯವಾಗುತ್ತಿರುವ ಕೋಲಾರ ನಗರಸಭೆ ಆಡಳಿತ ಖಂಡಿಸಿ ಹಾಗೂ ವಜಾಗೊಳಿಸಬೇಕೆಂದು ಒತ್ತಾಯಿಸಿ ಜುಲೈ 26ರಂದು ಕೆಜಿಎಫ್ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜುಲೈ 26ರ ನಂತರ ರಾಜ್ಯದ ಎಲ್ಲಾ ಬ್ಯಾಂಕ್ಗಳಿಗೆ ನುಗ್ಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಅವಕಾಶ ಸಿಗುವಂತೆ, ಬ್ಯಾಂಕುಗಳಲ್ಲಿ ಕನ್ನಡ ಕನ್ನಡೀಕರಣಗೊಳ್ಳುವಂತೆ ಒತ್ತಾಯಿಸಲಾಗುವುದು. ಈಗಾಗಲೇ ಗಡಿಭಾಗವಾದ ಕಾಸರಗೂಡು, ತಾಳವಾಡಿ, ಹೊಸೂರಿನಲ್ಲಿ ಕನ್ನಡ ಮಾಯವಾಗಿದೆ. ಬೆಳಗಾವಿಯಲ್ಲಿ ಮರಾಠಿಗರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕನ್ನಡ ಅಪಾಯಕ್ಕೆ ಸಿಲುಕಲಿದೆ ಎಂದು ಕಳವಳ ವ್ಯಕ್ತಪಡಿಸಿದರು.