ಮೈಸೂರು: ದುಡ್ಡಿರುವವರ ಮೋಜಿಗಾಗಿ ಬರುವ ಹೆಲಿ ಟೂರಿಸಂನಿಂದ ಲಲಿತ್ ಮಹಲ್ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಆದ್ದರಿಂದ, ಮೈಸೂರಿಗೆ ಹೆಲಿ ಟೂರಿಸಂ ಬೇಡ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಲಲಿತ್ ಮಹಲ್ ಹೆಲಿ ಪ್ಯಾಡ್ನ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಹೆಲಿ ಟೂರಿಸಂ ಹಣ ಇರುವವರ ಮೋಜಿಗಾಗಿ. ಇದರಿಂದ ಲಲಿತ್ ಮಹಲ್ ಹೋಟೆಲ್ ಮುಂಭಾಗದಲ್ಲಿ ಇರುವ ಬೃಹತ್ ಮರಗಳನ್ನ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ನೈಸರ್ಗಿಕ ಸಂಪತ್ತು ನಾಶವಾಗುತ್ತದೆ. ಮೈಸೂರಿನ ಕಾರಂಜಿ ಕೆರೆಗೆ ಬೇರೆ ಬೇರೆ ದೇಶಗಳಿಂದ ಪಕ್ಷಿಗಳು ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಜೊತೆಗೆ ಮೃಗಾಲಯದಲ್ಲಿ ಹಲವು ವಿಧದ ಪ್ರಾಣಿ ಪಕ್ಷಿಗಳು ಇದ್ದು. ಹೆಲಿ ಟೂರಿಸಂನಿಂದ ಅವುಗಳಿಗೆ ತೊಂದರೆಯಾಗುತ್ತದೆ ಎಂದರು.