ಮೈಸೂರು :ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿ, ಇವರ ವರ್ಗಾವಣೆ ಮಾಡಲು ದೊಡ್ಡ ಪಿತೂರಿ ನಡೆದಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರ ಬಂಡವಾಳ ಬಯಲಾಗುತ್ತದೆ ಎಂದು ಡಿಸಿ ವರ್ಗಾವಣೆ ಮಾಡಲು ಪಿತೂರಿ ಮಾಡುತ್ತಿದ್ದಾರೆ.
ಆದರೆ, ಯಾರು ಪಿತೂರಿ ಮಾಡುತ್ತಿದ್ದಾರೆ ಎಂದು ನಾನು ಹೇಳುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೂ ನನಗೂ ಆಗಲ್ಲ. ಆದರೆ, ಡಿಸಿಯನ್ನ ವರ್ಗಾವಣೆ ಮಾಡಬಾರದಂದು ಹೇಳ್ತೇನೆ ಅಂದ್ರು.
ಮೈಸೂರಿನಲ್ಲಿ ಕಳೆದ 25 ವರ್ಷಗಳಿಂದ ಸಾಕಷ್ಟು ಭೂ ಹಗರಣ ನಡೆದಿವೆ. ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. 25 ವರ್ಷದ ಕಡತಗಳನ್ನು ಪರಿಶೀಲನೆ ಮಾಡಬೇಕು. ಭೂಗಳ್ಳರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ರು.
SSLC ಪರೀಕ್ಷೆ ರದ್ದು ಮಾಡಿ :ಪಿಯುಸಿ ಪರೀಕ್ಷೆ ರದ್ದು ಮಾಡಿದಂತೆ SSLCಪರೀಕ್ಷೆ ರದ್ದು ಮಾಡಬೇಕು. ಇದಕ್ಕಾಗಿ ನಾಳೆ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸ್ತೇನೆ ಎಂದು ತಿಳಿಸಿದರು.