ಮೈಸೂರು: ಮೈಸೂರು ಪಾಕ್ ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ಮೈಸೂರು ಪಾಕ್ನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ವಾಟಾಳ್ ನಾಗರಾಜ್ ಅವರು ವಿಶೇಷವಾಗಿ ಆಕ್ರೋಶ ವ್ಯಕ್ತಪಡಿಸಿದ್ರು.
ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಎಲ್ಲದಕ್ಕೂ ಕ್ಯಾತೆ ತೆಗೆಯುತ್ತಾರೆ. ಕಾವೇರಿ, ಮೇಕೆದಾಟು ಆಯ್ತು ಈಗ ಮೈಸೂರು ಪಾಕ್ ನಮ್ಮದು ಎನ್ನುತ್ತಿದ್ದಾರೆ. ತಮಿಳುನಾಡು ರಾಜಕೀಯ ಮಾಡಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.
ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕವಾಗಿ ನಮಗೇ ಸೇರಿದೆ. ಆದರೆ ಇದರಲ್ಲಿ ಕ್ಯಾತೆ ತೆಗೆದರೆ ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.