ಮೈಸೂರು: ಒಂದು ಪಕ್ಷದಿಂದ ಗೆದ್ದು ಅಧಿಕಾರ ಹಾಗೂ ಹಣಕ್ಕಾಗಿ ಪಕ್ಷಾಂತರಗೊಳ್ಳುವ ರಾಜಕಾರಣಿಗಳು ನಾಯಿಗಳಿಗಿಂತ ಕಡಿಮೆ ಎಂದು ವಾಟಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹರಿಹಾಯ್ದಿದ್ದಾರೆ.
ಪಕ್ಷಾಂತರಿಗಳು ನಾಯಿಗಿಂತ ಕಡೆ: ವಾಟಾಳ್ ನಾಗರಾಜ್ ಕಿಡಿ
ಅಧಿಕಾರ ಹಾಗೂ ಹಣಕ್ಕಾಗಿ ಪಕ್ಷಾಂತರಗೊಳ್ಳುವ ರಾಜಕಾರಣಿಗಳು ನಾಯಿಗಳಿಗಿಂತ ಕಡಿಮೆ ಎಂದು ವಾಟಾಳ್ ನಾಗರಾಜ್ ಪಕ್ಷಾಂತರಿಗಳ ಮೇಲೆ ಹರಿಹಾಯ್ದಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುವ ರಾಜಕಾರಣಿಗಳಿಗೆ ಚುನಾವಣಾ ಆಯೋಗ 10 ವರ್ಷ ಚುನಾವಣೆಗೆ ನಿಲ್ಲದಂತೆ ನಿಷೇಧ ಹೇರಬೇಕು ಹಾಗೂ ಎರಡು ವರ್ಷ ಜೈಲು ಶಿಕ್ಷ ವಿಧಿಸಬೇಕು ಎಂದು ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣೆ ಆಯೋಗ ಪ್ರತಿ ಅಭ್ಯರ್ಥಿಗಳಿಗೆ 70 ಲಕ್ಷ ನಿಗದಿ ಮಾಡಿದೆ. ಆದರೆ ಅಭ್ಯರ್ಥಿಗಳು 70 ಕೋಟಿ ರೂ. ಖರ್ಚು ಮಾಡಿ ಹಣದ ಹೊಳೆ ಹರಿಸಿದ್ದಾರೆ. ಆದರೆ ಚುನಾವಣೆ ಆಯೋಗಕ್ಕೆ ಇದು ಕಾಣುದಿಲ್ಲವೆ, ಆಯೋಗಕ್ಕೆ ಕಣ್ಣಿಲ್ಲ ಎಂದು ಟೀಕಿಸಿದರು.
ಜಾತಿ ಹಾಗೂ ಹಣದಿಂದ ನಡೆಯುವ ಚುನಾವಣೆಗಳನ್ನು ನಿಲ್ಲಸಬೇಕು. ಇಲ್ಲವಾದರೆ ಚುನಾವಣೆ ವಿರುದ್ಧ ಜನರು ದಂಗೆ ಏಳುವುದು ಖಂಡಿತ ಎಂದು ಟೀಕಾಪ್ರಹಾರ ನಡೆಸಿದರು.