ಮೈಸೂರು: ಪರ್ಸೆಂಟೇಜ್ ವ್ಯವಸ್ಥೆ ಬಂದಿದ್ದೇ ಕಂಟ್ರಾಕ್ಟರ್ಗಳಿಂದ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು. ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಇದು ಇಂದಿನ ಸಮಸ್ಯೆಯಲ್ಲ. ಹತ್ತಾರು ವರ್ಷಗಳ ಸಮಸ್ಯೆ. ಈ ಕಮಿಷನ್ ದಂಧೆಗೆ ಕಂಟ್ರಾಕ್ಟರ್ಗಳೇ ಕಾರಣ ಎಂದರು.
ಪರ್ಸೆಂಟೇಜ್ ವ್ಯವಸ್ಥೆ ಬಂದಿದ್ದೇ ಕಂಟ್ರಾಕ್ಟರ್ಗಳಿಂದ : ವಾಟಾಳ್ ನಾಗರಾಜ್ - ಪರ್ಸೆಂಟೇಜ್ ವ್ಯವಸ್ಥೆ ಬಗ್ಗೆ ವಾಟಾಳ್ ನಾಗರಾಜ್ ಪ್ರತಿಕ್ರಿಯೆ
ಪರ್ಸೆಂಟೇಜ್ ವ್ಯವಸ್ಥೆ ಬಂದಿದ್ದೇ ಕಂಟ್ರಾಕ್ಟರ್ಗಳಿಂದ. ಕಂಟ್ರಾಕ್ಟರ್ಗಳು ಟೆಂಡರ್ ಪಡೆದುಕೊಳ್ಳಲು ಜಿದ್ದಿಗೆ ಬಿದ್ದು ಪರ್ಸೆಂಟೇಜ್ ಕೊಡ್ತಾರೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ದೂರಿದರು.
ವಾಟಾಳ್ ನಾಗರಾಜ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡಿರುವುದು ನೋವಿನ ಸಂಗತಿ. ಹೋರಾಟದ ಮೂಲಕ ಹಣ ವಸೂಲಿ ಮಾಡಬಹುದಿತ್ತು. ಆದರೆ, ಆತ್ಮಹತ್ಯೆ ಮಾಡಿಕೊಂಡಿರೋದು ಸರಿಯಾದ ನಿರ್ಧಾರ ಅಲ್ಲ. ಇದರಿಂದಾಗಿ ಸಂತೋಷ್ ಕುಟುಂಬ ಜೀವನ ಪೂರ್ತಿ ದುಃಖಪಡುತ್ತದೆ ಎಂದರು. ಪ್ರಕರಣ ಸಂಬಂಧ ಈಗಾಗಲೇ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಅವರ ಮೇಲೆ ಎಫ್ಐಆರ್ ಕೂಡಾ ದಾಖಲಾಗಿದೆ. ತನಿಖೆ ಬಳಿಕ ಮುಂದಿನ ಕ್ರಮ ಆಗುತ್ತೆ. ಸಿಎಂ ಈ ಬಗ್ಗೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ:ನೋಡಿ: ಗರಿಬಿಚ್ಚಿ ಸಂಭ್ರಮಿಸಿದ ನವಿಲು; ನಯನ ಮನೋಹರ ದೃಶ್ಯ