ಮೈಸೂರು:ಭ್ರಷ್ಟಾಚಾರದಲ್ಲಿ ತೊಡಗಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಬೇಕು ಎಂದು ವರುಣಾ ಮಹೇಶ್ ಆಗ್ರಹಿಸಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಹಂಗಾಮಿ ನೌಕರರನ್ನು ಮುಕ್ತ ವಿಶ್ವ ವಿದ್ಯಾನಿಲಯದ 1994 ಆ್ಯಕ್ಟ್ ಪ್ರಕಾರ 6 ತಿಂಗಳ ಕಾಲ ತೆಗೆದುಕೊಳ್ಳಬೇಕು. ಆದರೆ ಅದನ್ನು ಕುಲಪತಿ ವಿದ್ಯಾಶಂಕರ್ ಉಲ್ಲಂಘಿಸಿ 2 ರಿಂದ 4 ವರ್ಷ ಅವಧಿಗೆ ಸುಮಾರು 200 ಜನ ಹಂಗಾಮಿ ನೌಕರರನ್ನು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಎಲ್ಲಿಯೂ ಪ್ರಕಟಣೆ ಮಾಡಿಲ್ಲ. ಸರ್ಕಾರದಿಂದ ಅನುಮತಿ ಪಡೆಯದೆ ಹಣ ಮಾಡುವ ಉದ್ದೇಶದಿಂದ ಅವಶ್ಯಕತೆ ಇಲ್ಲದಿದ್ದರೂ 200 ಜನ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಆರ್ಟಿಒದವರು ಹಳೆ ಕಾರುಗಳು 2030 ರವರೆಗೂ ಇದೆ ಎಂದು ಹೇಳಿದ್ದಾರೆ. ಕಾರುಗಳನ್ನು ಹರಾಜು ಮಾಡಲು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ. ಕುಲಪತಿಯವರು 2 ಹಾಗೂ ರಿಜಿಸ್ಟ್ರಾರ್ 1 ಇನ್ನೊವಾ ಕಾರು ಖರೀದಿಸಿದ್ದಾರೆ. ಇದರ ಜೊತೆಯಲ್ಲಿ 33 ಜನರಿಗೆ ಮುಂಬಡ್ತಿ ನೀಡಿದ್ದಾರೆ. ಸರ್ಕಾರದವರು ಇದಕ್ಕೆ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ನೀಡಿಲ್ಲ ಇದು ಅಕ್ರಮ, ಕಾನೂನು ಉಲ್ಲಂಘನೆ. ಈ ರೀತಿಯಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಬೇಕು ಎಂದರು.