ಮೈಸೂರು: ಸಾಂಸ್ಕೃತಿನಗರಿಯಲ್ಲಿ ಈವರೆಗೂ ಭಾರತ ಬಂದ್‌ನ ಬಿಸಿ ಇನ್ನೂ ತಟ್ಟಿಲ್ಲ. ಒಂಚೂರು ಅಳುಕಿನಿಂದ ಜನ ಎಂದಿನಂತೆ ವಾಹನಗಳಲ್ಲಿ ಸಂಚರಿಸ್ತಿದ್ದಾರೆ.
ಶಾಲಾ-ಕಾಲೇಜುಗಳು,ಸಾರಿಗೆ ಸಂಸ್ಥೆ ಬಸ್, ಹೋಟೆಲ್‌ಗಳು ಎಂದಿನಂತಿವೆ. ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ಸ್ವಲ್ಪ ಕಡಿಮೆ ಇದೆ. ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಬ್ಯಾಂಕ್ ನೌಕರರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಪ್ರತಿಭಟನಾ ಮೆರವಣಿಗೆಯನ್ನು ಜೆಕೆ ಮೈದಾನದಿಂದ ಪುರಭವನದವರಗೆ ಮಾತ್ರ ನಡೆಸಲು ಅನುಮತಿ ನೀಡ್ಲಾಗಿದೆ.