ಕರ್ನಾಟಕ

karnataka

ETV Bharat / state

ಬಿಜೆಪಿ ಅಧಿಕಾರಕ್ಕೇರಲು ಸಹಾಯ ಮಾಡಿದ ಯಾರಿಗೂ ಮೋಸ ಮಾಡಲ್ಲ: ಸಚಿವ ವಿ.ಸೋಮಣ್ಣ - ಹೈಕಮಾಂಡ್

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ನೂತನ ಸಚಿವ ವಿ.ಸೋಮಣ್ಣ , ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಆಶೀರ್ವಾದ ಪಡೆದರು.

ವಿ.ಸೋಮಣ್ಣ

By

Published : Aug 22, 2019, 5:45 AM IST

ಮೈಸೂರು :ಬಿಜೆಪಿ ಸರ್ಕಾರ ರಚನೆಯಾಗಲು ಸಹಾಯ ಮಾಡಿದ ಯಾರನ್ನೂ ಕೈ ಬಿಡೋಲ್ಲಾ, ಅವ್ರಿಗೆ ಮೋಸ ಮಾಡುವುದಿಲ್ಲವೆಂದು ಅನರ್ಹಗೊಂಡಿರುವ ಶಾಸಕರ ಪರವಾಗಿ ನೂತನ ಸಚಿವ ವಿ.ಸೋಮಣ್ಣ ಬ್ಯಾಟಿಂಗ್ ಮಾಡಿದ್ದಾರೆ.

ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ನೂತನ ಸಚಿವ ವಿ. ಸೋಮಣ್ಣ

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ನೆರೆ ಪ್ರವಾಹದ ಬಗ್ಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಅನರ್ಹಗೊಂಡಿರುವ 17 ಶಾಸಕರಿಗೆ ಮುಂದೆ ಒಳ್ಳೆಯ ಅವಕಾಶವೇ ಸಿಗಲಿದೆ ಕಾದು ನೋಡಿ ಎಂದು ತಿಳಿಸಿದ್ದಾರೆ.

ಖಾತೆ ಹಂಚಿಕೆ ವಿಳಂಬ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪನವರು ಮುಂಚಿನ ಯಡಿಯೂರಪ್ಪ ಅಲ್ಲ ತುಂಬಾ ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಸಂಪುಟ ರಚನೆಗೆ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಶಾಸಕರೇ ಸರಿಯಾಗಿದ್ದಾರೆ. ನಾನೇ ಅವರನ್ನ ಕರೆದುಕೊಂಡು ಹೋಗಿ ಸರಿಪಡಿಸಿದ್ದೇನೆ. ಗೂಳಿಹಟ್ಟಿ ಚಂದ್ರಶೇಖರ್ ಅಂತವರೇ ಸರಿಯಾಗಿದ್ದಾರೆ. ಬಿಜೆಪಿ ಶಾಸಕರದ್ದು ಅಸಮಾಧಾನ ಅಲ್ಲ ಅವರು ಕೇವಲ ಅವರ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಹಿರಿಯರಿದ್ದಾರೆ. ಇದು ಒಂದು ರೀತಿ ಸಮ್ಮಿಶ್ರ ಸರ್ಕಾರನೇ. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಬುದ್ದಿವಂತಿಕೆಯಿಂದ ಕೆಲಸ ಮಾಡ್ತಾ ಇದ್ದಾರೆ ಎಂದರು. ಕೆಲವರಿಗೆ ಅರ್ಹತೆ ಇದೆ ಅರ್ಹತೆಗೆ ತಕ್ಕಂತೆ ಅವಕಾಶ ಸಿಗುತ್ತೆ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಶಾಸಕರಿಂದಲ್ಲೇ ಅಪಾಯವಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಟೀಕಿಸುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ಟೀಕೆಗೆ ನಮ್ಮ ಕ್ಯಾಪ್ಟನ್ ಉತ್ತರ ನೀಡಲಿದ್ದಾರೆ ಎಂದರು. ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ ಬಗೆಹರಿಯಲಿದೆ. ನನಗೆ ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೆನೆ ಎಂದು ತಿಳಿಸಿದರು.

ಮಂಗಳವಾರ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಎಲ್ಲರನ್ನೂ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಗಳಿಗೆ ಓಡಿಸಿದ್ದಾರೆ. ಎಲ್ಲರಿಗೂ ಎರಡು ಗಂಟೆ ನೀತಿ ಪಾಠ ಹೇಳಿದ್ದಾರೆ. ಯಾರಿಗೆ ಯಾವ ಜಿಲ್ಲೆಯನ್ನಾದರೂ ನೀಡಬಹುದು. ಮೊದಲು ಪ್ರವಾಹ ಸಂತ್ರಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರು ಕೈಜೋಡಿಸಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಹೇಳಿದರು. ಮಠಮಾನ್ಯಗಳು ನಮಗೆ ಆಧಾರ ಸ್ತಂಭ ಸರ್ಕಾರದ ಕೆಲವು ಏಳು ಬೀಳುಗಳನ್ನು ಸರಿಪಡಿಸಲು ಶ್ರೀಗಳ ಆಶೀರ್ವಾದದ ಅವಶ್ಯಕತೆ ಇದೆ ಎಂದರು.

ABOUT THE AUTHOR

...view details