ಕರ್ನಾಟಕ

karnataka

ETV Bharat / state

ಹಳೆಯ ಬ್ಯಾನರ್‌ಗೆ ಹೊಸ ಸ್ಟಿಕ್ಕರ್.. ಇದು ಬಿಜೆಪಿ ಸರ್ಕಾರ, ಕಾಂಗ್ರೆಸ್​ ಅಲ್ಲ.. ಸಚಿವ ವಿ ಸೋಮಣ್ಣ ಗರಂ - bjp government

ದಸರಾದ ಉದ್ಘಾಟನಾ ಬ್ಯಾನರ್‌ನಲ್ಲಿ ಎರಡು ವರ್ಷದ ಹಿಂದಿನ ಉಮಾಶ್ರೀ ಭಾವಚಿತ್ರವಿರುವ ಫ್ಲೆಕ್ಸ್, ಸ್ಟಿಕ್ಕರ್ ಹಾಕಿರುವುದನ್ನು ಪತ್ರಕರ್ತರು ಗಮನಕ್ಕೆ ತಂದಾಗ ಸಚಿವ ವಿ.ಸೋಮಣ್ಣ ಅಲ್ಲೇ ಇದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಅದನ್ನ ತೆರವುಗೊಳಿಸುವಂತೆ ಆದೇಶ ನೀಡಿದರು.

ಮಹಿಳಾ ದಸರಾ ಉದ್ಘಾಟನೆ

By

Published : Sep 30, 2019, 5:06 PM IST

ಮೈಸೂರು :ಹಳೆಯ ಬ್ಯಾನರ್‌ಗೆ ಹೊಸ ಸ್ಟಿಕ್ಕರ್ ಹಾಕಿರುವ ಬಗ್ಗೆ ಸಚಿವ ವಿ. ಸೋಮಣ್ಣ ಮಹಿಳಾ ದಸರಾ ಉಪ ನಿರ್ದೇಶಕಿಯನ್ನು ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು.

ಇಂದು ನಗರದ ಜೆ ಕೆ ಮೈದಾನದಲ್ಲಿ ಮಹಿಳಾ ದಸರಾ ಉದ್ಘಾಟನೆಗೆ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಚಿವ ವಿ. ಸೋಮಣ್ಣ, ‌ಮಹಿಳಾ ದಸರಾದ ಉದ್ಘಾಟನಾ ಬ್ಯಾನರ್ ನಲ್ಲಿ ಎರಡು ವರ್ಷದ ಹಿಂದಿನ ಉಮಾಶ್ರೀ ಅವರ ಭಾವಚಿತ್ರವಿರುವ ಫ್ಲೆಕ್ಸ್, ಸ್ಟಿಕ್ಕರ್ ಹಾಕಿರುವುದನ್ನು ಪತ್ರಕರ್ತರು ಗಮನಕ್ಕೆ ತಂದಾಗ, ಸಚಿವರು ಅಲ್ಲೇ ಇದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಹಿಳಾ ದಸರಾ ಉದ್ಘಾಟನೆಯಲ್ಲಿ ಅಧಿಕಾರಿಗಳ ಯಡವಟ್ಟು..

ಇದು ಬಿಜೆಪಿ ಸರ್ಕಾರ, ಕಾಂಗ್ರೆಸ್ ಸರ್ಕಾರವಲ್ಲ. ಹಳೆಯ ಬೋರ್ಡ್ ಹೊಸ ಬಿಲ್ ವ್ಯವಹಾರ ಬೇಡ. ಮಧ್ಯಾಹ್ನದೊಳಗೆ ಎಲ್ಲವನ್ನೂ ತೆರವುಗೊಳಿಸಿ ಎಂದು ಸ್ಥಳದಲ್ಲೇ ಆದೇಶ ನೀಡಿದರು. ಇದರಿಂದಾಗಿ ಉದ್ಘಾಟನೆ ದಿನವೇ ಮಹಿಳಾ ದಸರಾದಲ್ಲಿ ಸಚಿವರಿಗೆ ಇರಿಸುಮುರುಸು ಉಂಟಾಯಿತು.

ABOUT THE AUTHOR

...view details