ಮೈಸೂರು :ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಒಬ್ಬರ ವಿರುದ್ಧ ಮತ್ತೊಬ್ಬರು ಹೇಳಿಕೆ ನೀಡುತ್ತಿದ್ದಾರೆ. ಇಂದು ಖಾದರ್ ಕುರಿತು ಪ್ರತಾಪ್ ಹೇಳಿಕೆಗೆ ಪತ್ರದ ಮೂಲಕವೇ ಮಾಜಿ ಸಚವ ತಿರುಗೇಟು ನೀಡಿದ್ದಾರೆ.
ನನ್ನನ್ನು ಮುಲ್ಲಾ ಎಂದು ಪ್ರತಾಪ್ ಸಿಂಹ ಕರೆದರೆ ನಾನು ಖುಷಿಪಡುತ್ತೇನೆ. ಯಾಕೆಂದರೆ, ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೂರಾರು ಮುಲ್ಲಾಗಳು ಗಾಂಧೀಜಿಗೆ ಹೆಗಲಾಗಿದ್ದರು. ಹತ್ತಾರು ಮುಲ್ಲಾಗಳು/ಮೌಲ್ವಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.
ಈಗ ಇತಿಹಾಸಕ್ಕೆ ಬರೋಣ. ಈಗೇನಾದರೂ ಸಾವರ್ಕರ್ ಬದುಕಿದ್ದರೆ ಮೈಸೂರು ರೈಲಿಗೆ ಟಿಪ್ಪು ಎಕ್ಸ್ಪ್ರೆಸ್ ಎಂದು ಹೆಸರು ಇರಬೇಕು ಎಂಬುದನ್ನು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು. ಈ ದೇಶಕ್ಕೆ ಬ್ರಿಟಿಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪು ಎಂದು ಸಾವರ್ಕರ್ ಹೇಳುತ್ತಾರೆ.