ಕರ್ನಾಟಕ

karnataka

ETV Bharat / state

'ನೀವು ಕರೆ ಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ' ಎನ್ನುವ ಧ್ವನಿ ಮೌನ - ಮೈಸೂರು ಸುದ್ದಿ

‘ನೀವು ಕರೆ ಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ’ ಎಂಬ ದನಿ ನೀಡಿದ್ದ ಕಲಾವಿದೆ ಉಷಾ ಪಾಠಕ್ (66) ಅನಾರೋಗ್ಯದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಜೂನ್ 22ರಂದು ನಿಧನರಾದರು.

Usha Patak
ಉಷಾ ಪಾಠಕ್

By

Published : Jun 30, 2020, 5:39 AM IST

ಮೈಸೂರು: ಸ್ಥಿರ ದೂರವಾಣಿ ಹಾಗೂ ಮೊಬೈಲ್‌ ಬಳಕೆಯ ಆರಂಭದ ದಿನಗಳಲ್ಲಿ ಕೇಳಿಬರುತ್ತಿದ್ದ ‘ನೀವು ಕರೆ ಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ’ ಎಂಬ ದನಿ ನೀಡಿದ್ದ ಕಲಾವಿದೆ ಉಷಾ ಪಾಠಕ್ (66) ಅನಾರೋಗ್ಯದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಜೂನ್ 22ರಂದು ನಿಧನರಾದರು.

ಮೈಸೂರಿನ ಅರಮನೆಯ ಕಲಾವಿದರಾಗಿದ್ದ ಎಸ್‌.ಆರ್‌.ಅಯ್ಯಂಗಾರ್ ಅವರ ಪುತ್ರಿಯಾದ ಇವರು, ಬಿಎಸ್‌ಎನ್‌ಎಲ್‌ ಉದ್ಯೋಗಿಯಾಗಿದ್ದರು. ನಾಟಕ, ನೃತ್ಯ, ಹಾಡುಗಾರಿಕೆಯಲ್ಲಿ ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದೆಯಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿನ ತಮ್ಮ ಪುತ್ರರ ನಿವಾಸದಲ್ಲಿ ನೆಲೆಸಿದ್ದರು.

ABOUT THE AUTHOR

...view details