ಕರ್ನಾಟಕ

karnataka

By

Published : Sep 10, 2021, 1:31 AM IST

ETV Bharat / state

ನವವಿವಾಹಿತನನ್ನು ಬಲಿ ಪಡೆದ ಹುಲಿ ಸೆರೆಗೆ 40 ಕ್ಯಾಮೆರಾ ಬಳಕೆ

ನವವಿವಾಹಿತನನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಸೂಚಿಸಿದ್ದು, ಈ ಹಿನ್ನೆಲೆ 40 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನವವಿವಾಹಿತನನ್ನು ಬಲಿ ಪಡೆದ ಹುಲಿ ಸೆರೆಗೆ 40 ಕ್ಯಾಮೆರಾ ಬಳಕೆ
ನವವಿವಾಹಿತನನ್ನು ಬಲಿ ಪಡೆದ ಹುಲಿ ಸೆರೆಗೆ 40 ಕ್ಯಾಮೆರಾ ಬಳಕೆ

ಮೈಸೂರು: ನವವಿವಾಹಿತನನ್ನು ಬಲಿ ಪಡೆದ ಹುಲಿ ಸೆರೆಗಾಗಿ ನಲವತ್ತು ಕಡೆ ಕ್ಯಾಮೆರಾ ಟ್ರಾಪ್​ಗಳನ್ನು ಅಳವಡಿಸಲಾಗಿದೆ.ಅಲ್ಲದೇ ಎರಡು ಬೋನ್ ಗಳನ್ನು ಇಡಲಾಗಿದೆ.

ಹುಣಸೂರು ತಾಲೂಕಿನ ಅಯ್ಯನಕೆರೆ ಹುಂಡಿ ನಿವಾಸಿ ಗಣೇಶ್ ಎಂಬಾತ ಹುಲಿ ದಾಳಿಗೆ ಬಲಿಯಾಗಿದ್ದ. ಮೃತನ ಮನೆಗೆ ಶಾಸಕ ಮಂಜುನಾಥ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ,2ಲಕ್ಷ ರೂ.ಚೆಕ್ ಚೆಕ್ ಅನ್ನು ವಿತರಿಸಿದ್ದರು.

ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿರುವುದರಿಂದ, ಸಾಕಾನೆಗಳು, ಮಾವುತರು ಕಾವಾಡಿಗಳು, ಟ್ಯಾಕರ್, ಎಸ್ ಟಿಪಿಎಫ್ ಸಿಬ್ಬಂದಿಯನ್ನ ಅಯ್ಯನಕೆರೆ ಹಾಡಿಗೆ ಕರೆಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ‌.

ABOUT THE AUTHOR

...view details