ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಹೆಚ್ ವಿಶ್ವನಾಥ್ ಹಾಗೂ ಸಚಿವ ಕೆ ಎಸ್ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದೇ ವೇದಿಕೆಯಲ್ಲಿ ಟಗರುಗಳ ಸಮಾಗಮ.. ಸಿದ್ದರಾಮಯ್ಯ-ಈಶ್ವರಪ್ಪ ಪರಸ್ಪರ ಚರ್ಚೆ.. - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಆರ್‌ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಲಾಯಿತು.
ಸಿದ್ದರಾಮಯ್ಯ- ಈಶ್ವರಪ್ಪ ಪರಸ್ಪರ ಚರ್ಚೆ
ಕೆಆರ್‌ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ವೇದಿಕೆ ಕಾರ್ಯಕ್ರಮದಲ್ಲಿ ಆಸೀನರಾದ ಕೆ ಎಸ್ ಈಶ್ವರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಮಾತುಕತೆ ನಡೆಸಿದರು. ತಮ್ಮ ಪಕ್ಕದಲ್ಲೇ ವಿಶ್ವನಾಥ್ ಕುಳಿತಿದ್ದರೂ ಸಹ ಕ್ಯಾರೇ ಎನ್ನದೇ ಸಿದ್ದರಾಮಯ್ಯನವರುಈಶ್ವರಪ್ಪನವರ ಜೊತೆ ಮಾತುಕತೆಯಲ್ಲಿ ಬ್ಯುಸಿಯಾಗಿದ್ದರು.
ಇನ್ನು ಹಾವು- ಮುಂಗುಸಿಯಂತೆ ಕಚ್ಚಾಡುತ್ತಿದ್ದ ಇವರು ಒಂದೇ ವೇದಿಕೆಯಲ್ಲಿ ಕೂತು ಮಾತುಕತೆ ನಡೆಸುತ್ತಿದ್ದ ದೃಶ್ಯ ಸಮುದಾಯದ ಮುಖಂಡರಿಗೆ ಸಂತಸ ತಂದಿತು.