ಮೈಸೂರು: ಜಾನುವಾರುಗಳ ಮೈ ತೊಳೆಯಲು ಹೋಗಿ ಇಬ್ಬರು ಯುವಕರು ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಪಿರಿಯಾಪಟ್ಟಣ ತಾಲೂಕಿನ ತರಿಕಲ್ಲು ಗ್ರಾಮದ ಬಾಲಕೆರೆಯಲ್ಲಿ ನಡೆದಿದೆ.
ಹಸುವಿನಕಾವಲು ಗ್ರಾಮದ ದರ್ಶನ್ (20), ರಂಜು (22) ಎಂಬುವರು ಮೃತ ಯುವಕರು. ಸೋಮವಾರ ಬೆಳಗ್ಗೆ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದಾಗ ದರ್ಶನ್ ಮತ್ತು ರಂಜು ಕಾಲುಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿದ್ದ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.